ಮಿತ್ತೂರು ಫ್ರೀಡಂ ಕಮ್ಯೂನಿಟಿ ಹಾಲಿನಲ್ಲಿ ಉಗ್ರ ಚಟುವಟಿಕೆ | ಎನ್‍.ಐ.ಎ. ವಶಕ್ಕೆ ಫ್ರೀಡಂ ಕಮ್ಯೂನಿಟಿ ಹಾಲ್

ಪುತ್ತೂರು : ಬಿಜೆಪಿ ಯುವ ಮುಖಂಡ, ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ನಡೆದ ತನಿಖೆ ವೇಳೆ ಕಬಕ ಸಮೀಪದ ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿಯ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ಪಿಎಫ್ ಐ ಸದಸ್ಯರಿಗೆ ಅನಧಿಕೃತವಾಗಿ ಭಯೋತ್ಪಾದನಾ ಚಟುವಟಿಕೆಗೆ ಸಹಕಾರಿಯಾಗುವ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ ಎಂಬ ವಿಚಾರ ಬಹಿರಂಗಗೊಂಡ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ಫ್ರೀಡಂ ಕಮ್ಯೂನಿಟಿ ಹಾಲ್ ನ್ನು ಸ್ವಾಧೀನಪಡಿಸಿಕೊಂಡು ಬೀಗ ಜಡಿದಿದೆ.

ಮಿತ್ತೂರಿನಲ್ಲಿ ಸುಮಾರು 0.20 ಎಕ್ರೆ ಜಾಗದಲ್ಲಿ ಈ ಕಮ್ಯೂನಿಟಿ ಹಾಲ್ ಇದ್ದು, ಮಿತ್ತೂರು ಕಮ್ಯೂನಿಟಿ ಹಾಲ್ ಎಂಬ ಹೆಸರಿನಲ್ಲಿ ಮದುವೆ, ಇನ್ನಿತರ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದರೊಂದಿಗೆ ತನ್ನ ಗುಪ್ತ ಚಟುವಟಿಕೆಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಳಸಿಕೊಳ್ಳಲಾಗುತ್ತಿತ್ತು ಎಂಬ ಗುಮಾನಿ ಮೇರೆಗೆ ಎನ್ ಐಎಯ ತನಿಖಾ ನಡೆಸಿದ ತನಿಖೆ ವೇಳೆ ದೃಡಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡ ಯುಎ (ಪಿ) ಸೆಕ್ಷನ್ 25/1067 ಕಾನೂನಿನನ್ವಯ ಕಾನೂನು ಹಾಹಿರ ಚಟುವಟಿಕೆ ತಡೆ ಕಾಯ್ದೆಯಂತೆ ತನಿಖಾ ಸಂಸ್ಥೆಯ ಮಹಾನಿರ್ದೇಶಕರ ಸೂಚನೆ, ಆದೇಶದಂತೆ ಬೆಂಗಳೂರು ಕಚೇರಿಯ ಮುಖ್ಯ ತನಿಖಾಧಿಕಾರಿ ಎಂ.ಷಣ್ಮುಗಂ ನೇತೃತ್ವದ ತಂಡ ಮಿತ್ತೂರು ಫ್ರೀಡಂ ಕಮ್ಯೂನಿಟಿ ಹಾಲ್ ನ್ನು ಸ್ವಾಧೀನ ಪಡಿಸಿಕೊಂಡಿದೆ. ಇದರ ಅನ್ವಯ ಈ ಭೂಮಿ ಪರಭಾರೆ ಮಾಡುವುದಾಗಲಿ, ಬಾಡಿಗೆಗೆ ನೀಡುವುದಾಗಲಿ, ಯಾವುದೇ ಬದಲಾವಣೆ ಮಾಡುವುದನ್ನು ಎನ್ ಐಎ ಸಂಪೂರ್ಣ ನಿಷೇಧಿಸಿ ಗುರುವಾರ ಆದೇಶ ಜಾರಿಗೊಳಿಸಿದೆ. ಆದೇಶದ ಪ್ರತಿಯನ್ನು ದ.ಕ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿಟ್ಲ ಪೊಲೀಸ್ ಠಾಣೆ ಎಸ್ಎಚ್ ಒ ಅವರಿಗೆ ಕಳುಹಿಸಿಕೊಡಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top