ಬಂಟ್ವಾಳ : ಬಂಟ್ವಾಳ ತಾಲೂಕಿನ ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.5 ರಿಂದ 9 ರ ತನಕ ಪರಮಪೂಜ್ಯ ದೈವೈಕ್ಯ ಶ್ರೀ ತನಿಯಪ್ಪ ಗುರುವರ್ಯಯ ದಿವ್ಯ ಸ್ಮರಣೆಯೊಂದಿಗೆ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.4 ಶನಿವಾರ ಸಾಮೂಹಿಕ ಪ್ರಾರ್ಥನೆ, ಶಿಲ್ಪಿಗಳಿಂದ ಶ್ರೀದೇವಿಯ ದೇವಾಲಯ ಪರಿಗ್ರಹ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ಪುಣ್ಯಾಹ, ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತುಬಲಿ, ಪ್ರಾಕಾರಬಲಿ ನಡೆಯಲಿದೆ.
ಮಾ.5 ಭಾನುವಾರ ಬೆಳಿಗ್ಗೆ 6ಕ್ಕೆ 48 ನಾರಿಕೇಳ ಮಹಾಗಣಪತಿ ಹೋಮ ಆರಂಭ, 8 ಕ್ಕೆ ಉದಯ ಪೂಜೆ, 10.30 ಕ್ಕೆ ಸಂಕಲ್ಪ ಅನುಸಾರ ಭಜನಾ ಕಾರ್ಯಕ್ರಮದ 167ನೇ ವಾರದ ಭಜನಾ ಸೇವೆ, 11 ಕ್ಕೆ ಮಹಾಗಣಪತಿ ಹೋಮ ಪೂರ್ಣಾಹುತಿ, ಮಹಾಮಂಗಳಾರತಿ, ಶ್ರೀ ದೇವಿಯ ಮಹಾಪೂಜೆ, ಪ್ರಸಾದ ವಿತರಣೆ, 10 ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ವಿಟ್ಲ ಅರಮನೆಯ ಅನುವಂಶಿಕ ಆಡಳಿತದಾರ ಬಂಗಾರ ಅರಸರು ಉದ್ಘಾಟಿಸುವರು. ಸಂಜೆ 5 ಕ್ಕೆ ಉಗ್ರಾಣ ಮುಹೂರ್ತವನ್ನು ಬಾಳೆಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಮೊಕ್ತೇಸರ ಕೊಗಪ್ಪ ಪೂಜಾರಿ ಬಾಳೆಕಲ್ಲು ನೆರವೇರಿಸುವರು. 6 ರಿಂದ ದೀಪಾರಾಧನೆ, ಭಜನೆ, ಸ್ಥಳಶುದ್ಧಿ, ನೂತನ ಶ್ರೀದೇವಿಯ ಬಿಂಬ ಪರಿಗ್ರಹ, ನೂತನ ರಥದ ಪರಿಗ್ರಹ, ಶ್ರೀದೇವಿಯ ಬಿಂಬ ಜಲಾಧಿವಾಸ, ಧಾನ್ಯದಿವಾಸ, ಅದಿವಾಸ ಹೋಮ ಮತ್ತಿತರ ವೈದಿಕ ಕಾರ್ಯಕ್ರಮಗಳು ಜರಗಲಿವೆ. ಸಂಜೆ 7 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಕುಕ್ಕಾಜೆಯ ಪರಮಪೂಜ್ಯ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಆಶೀರ್ವಚನ ನೀಡುವರು. ಮಾಣಿಲ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಗಣೇಶ್ ಕುಮಾರ್ ದೇಲಂತಮಜಲು ಉದ್ಘಾಟಿಸುವರು. ಶ್ರೀಕ್ಷೇತ್ರ ಕುಕ್ಕಾಜೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಗೀತಪ್ರಕಾಶ್ ಅಧ್ಯಕ್ಷತೆ ವಹಿಸುವರು.
ಮಾ..6 ಸೋಮವಾರ ಬೆಳಿಗ್ಗೆ 6 ರಿಂದ ಗಣಪತಿ ಹವನ ಮುಂತಾದ ವೈದಿಕ ಕಾರ್ಯಕ್ರಮಗಳು, 7.45 ರಿಂದ 8.30 ರ ವರೆಗಿನ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ದೇವಿಯ ವಿಗ್ರಹ ಪ್ರತಿಷ್ಠೆ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಜರಗಲಿದೆ. ಸಂಜೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 6 ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ರಾಮನಗರ ಸೋಲೂರು ಆರ್ಯ ಈಡಿಗ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೊಂಡವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಅರುಣಾನಂದ ಸ್ವಾಮೀಜಿ, ಯೋಗಾನಂದ ಸರಸ್ವತಿ ಸ್ವಾಮೀಜಿಗಳು ಆಶೀರ್ವಚನ ನೀಡುವರು. ಮೂಡಬಿದರೆ ಆಳ್ವಾಸ್ ಎಜುಕೇಶನ್ ಪೌಂಡೇಶನ್ ಚೆಯರ್ಮ್ಯಾನ್ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸುವರು.
ಮಾ.7 ಮಂಗಳವಾರ ಮುಂಜಾನೆ 6 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, 9 ಕ್ಕೆ ಚಂಡಿಕಾ ಹೋಮ, ಸಂಜೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 6 ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಚಿತ್ರಮೂಲ ಬಾಯಾರು ಶ್ರೀ ಉಮೇಶ್ವರ ಕಾಳಿ ತೀರ್ಥ ಸ್ವಾಮೀಜಿ, ಮೂಡಬಿದಿರೆ ಕರಿಂಕೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಉದ್ಯಮಿ ಜಯಂತ ನಡುಬೈಲು ಅಧ್ಯಕ್ಷತೆ ವಹಿಸುವರು. ಮಾ.8 ಬುಧವಾರ ಮುಂಜಾನೆ 6 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಶ್ರೀದೇವಿ ಹಾಗೂ ಸಪರಿವಾರ ದೈವದೇವರಿಗೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಶಿಖರ ಕಲಶಾಭಿಷೇಕ ಜರಗಲಿದೆ. ಸಂಜೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 6 ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ, ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡುವರು.
ಮಾ.9 ಗುರುವಾರ ಮುಂಜಾನೆ 6 ಕ್ಕೆ ಗಣಪತಿ ಹೋಮ, ಬೆಳಿಗ್ಗೆ 10 ಕ್ಕೆ ನಡೆಯುವ ಧಾರ್ಮಿಕ ಸಭೆಯ ಸಮಾರೋಪದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಕಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಕಿ, ಕುಕ್ಕಾ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಆಶೀರ್ವಚನ ನೀಡುವರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.