ವಿಧಾನಸಭೆಯಲ್ಲಿ ವಿದಾಯದ ಭಾಷಣ ಮಾಡಿದ ಬಿ.ಎಸ್.ವೈ. | ರಾಜಕೀಯ ನಿವೃತ್ತಿ ಘೋಷಿಸಿದ ಯಡಿಯೂರಪ್ಪ

ಬೆಂಗಳೂರು: ಇದೇ ನನ್ನ ಕೊನೆ ಅಧಿವೇಶನ ಎನ್ನುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಿಸಿದ ಬಿ.ಎಸ್. ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿದರು.

ಬುಧವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದು, ಮತ್ತೆ ಈ ಸದನಕ್ಕೆ ಬರುವುದಿಲ್ಲ. ಇದೇ ಕೊನೆಯ ಅಧಿವೇಶನ ಎನ್ನುತ್ತಲೇ ಭಾವುಕರಾದರು ಬಿ.ಎಸ್.ವೈ.

ಇದೇ ಸಂದರ್ಭ ವಿಪಕ್ಷಗಳ ಆರೋಪಗಳಿಗೂ ಉತ್ತರ ನೀಡಿದ ಅವರು, ‘ಬಿಜೆಪಿ ನನ್ನನ್ನು ಕಡೆಗಣಿಸಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಆದರೆ, ಬಿಜೆಪಿ ಅಥವಾ ಪ್ರಧಾನಿ ಮೋದಿ ನನ್ನನ್ನು ಕಡೆಗಣಿಸಿಲ್ಲ. ಇದುವರೆಗೆ ಹಲವು ಅವಕಾಶಗಳನ್ನು, ಉತ್ತಮ ಹುದ್ದೆಗಳನ್ನು ನನಗೆ ನೀಡಿವೆ. ಹೀಗಾಗಿ ಪಕ್ಷ ಹಾಗೂ ಮೋದಿಯವರಿಗೆ ನಾನು ಋಣಿಯಾಗಿದ್ದೇನೆ’ ಎಂದ ಅವರು, ಇನ್ನು ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top