ಪುತ್ತೂರು: ಅಡ್ಯನಡ್ಕ ಶೈಕ್ಷಣಿಕ ಕಾರ್ಯಗಾರದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಒಂದೇ ನಾಣ್ಯದ ಎರಡು ಮುಖಗಳಂತೆ ಎಂದು ಸಾಬೀತಾಗಿದ್ದು, ಈ ವಿಷಯದಲ್ಲಿ ಉಳ್ಳಾಲ ಕಾಂಗ್ರೆಸ್ ಶಾಸಕರು ಮತ್ತು ನಿಷೇಧಿತ ಪಿ.ಎಫ್.ಐ ಸಂಘಟನೆಯ ರಾಜಕೀಯ ಪಾರ್ಟಿಯಾದ ಎಸ್ ಡಿಪಿಐ ಮುಖಂಡ ನೀಡಿದ ಹೇಳಿಕೆಯಲ್ಲಿ ಸಾಮ್ಯತೆ ಇದೆ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ತಿಳಿಸಿದ್ದಾರೆ.
ಈ ಎರಡು ಪಾರ್ಟಿಗಳು ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರ ಪರವಾಗಿ ನಿಲ್ಲದೆ ಕಾರ್ಯಾಗಾರ ನಡೆಸಿದ ಸಂಘಟನೆ ಪರವಾಗಿ ನಿಂತಿರುವುದು ಖೇದಕರ. ಪ್ರತಿ ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಗೆ ತಪ್ಪಿಸದೆ ಹೋಗುವ ಒಂದು ಮತದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಅವಕಾಶ ಕೊಡುವ ಇಂಥ ಮುಖ್ಯ ಶಿಕ್ಷಕರಿಗೆ ಹಿಂದೂಗಳ ಪವಿತ್ರ ದಿನವಾದ ಶಿವರಾತ್ರಿಯಂದೇ ಹಿಂದೂ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಇಸ್ಲಾಂ ಯೂತ್ ಸಂಘಟನೆಯೊಂದಿಗೆ ಒಳ ಒಪ್ಪಂದ ನಡೆಸಿ ಶಾಲೆಯಿಂದ ದೂರವಿರುವ ಕಟ್ಟಡದಲ್ಲಿ ಕಾರ್ಯಾಗಾರ ನಡೆಸುವ ಔಚಿತ್ಯವಾದರು ಏನು? ಇಂಥ ಷಡ್ಯಂತ್ರವನ್ನು ಬಯಲಿಗೆಳೆದ ಹಿಂದೂ ಜಾಗರಣ ವೇದಿಕೆ ಪ್ರಮುಖರಿಗೆ ಹಾಗೂ ಬಿ.ಎಮ್.ಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.