ಪೆರ್ನೆ : ಮರದಿಂದ ಬಿದ್ದು ಒಂದು ಕಾಲಿನ ಸ್ವಾಧೀನ ಕಳೆದುಕೊಂಡಿರುವ ಕೆದಿಲ ಗ್ರಾಮದ ಕಾಂಜಲಿಕೆ ವಿಠಲ ಅವರಿಗೆ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲ ತಂಡದ ಸದಸ್ಯರು ವಾಕರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ಪೆರ್ನೆ ವಲಯ ಮೇಲ್ವಿಚಾರಕಿ ಜಯಶ್ರೀ ಮತ್ತು ಸಂಯೋಜಕಿ ಅಸ್ಮಿತಾ ಅವರ ಮಾರ್ಗದರ್ಶನದಲ್ಲಿ ಕೆದಿಲ ಸೇವಾಪ್ರತಿನಿದಿಗಳಾದ ಶಾರದ, ಜಯಂತಿ ಮತ್ತು ಶೌರ್ಯ ಘಟಕದ ಸದಸ್ಯರಾದ ಜಗದೀಶ, ಶೀನಪ್ಪ, ಗಿರೀಶ ವಿತರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿಟ್ಲ ಇದರ ಪೆರ್ನೆ ವಲಯದ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಡಿ ಕೆದಿಲ ತಂಡ ಕಾರ್ಯಾಚರಿಸುತ್ತಿದೆ.