ಫೆ.25 : ವಿಜಯನಗರ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ 32ನೇ ವರ್ಷದ ವಾರ್ಷಿಕೋತ್ಸವ | ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು : ವಿಜಯನಗರ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ 32ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಫೆ.25 ಶನಿವಾರ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಗಣಪತಿ ಹವನ, ಸಂಜೆ 7 ಕ್ಕೆ ಪೂಜೆ ಆರಂಭ, 7.30 ಕ್ಕೆ ಅಳಿಕೆ ಶ್ರೀ ಸ್ಕಂದ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಲಿದೆ.

ರಾತ್ರಿ 9 ಕ್ಕೆ ಮಹಮಂಗಳಾರತಿ, ಪ್ರಸಾದ ವಿತರಣೆ ನಡೆದು ಬಳಿಕ ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶಿರ್ವಚನ ನೀಡುವರು. ರಾತ್ರಿ 9.30 ರಿಂದ ಅನ್ನಸಂತರ್ಪಣೆ ಜರಗಲಿದೆ ಎಂದು ವಿಶ್ವಸ್ಥ ನಿಧಿ ಪ್ರಕಟಣೆಯಲ್ಲಿ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top