ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರದ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಸಂಜೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ಕಂಡನಾಯಕ ಕಟ್ಟೆಯಲ್ಲಿ ಪೂಜೆ ನಡೆದು ಪಲ್ಲಕಿ ಉತ್ಸವ ನಡೆಯಿತು. ಬಳಿಕ ರಾತ್ರಿ ೯ ಗಂಟೆಯಿಂದ ಅಷ್ಠಾವಧಾನ ಸೇವೆ ಜರಗಿತು. ಸಂಜೆ ದೇವರ ಬಲಿ ಉತ್ಸವದ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಹೊರಾಂಗಣದಲ್ಲಿ ಘೋಷ್ ವಾದನ ಪ್ರದರ್ಶನಗೊಂಡಿತು.
ರಾತ್ರಿ ಬಳಿಕ ಬಂಡಿ ಉತ್ಸವ, ತೆಪ್ಪೋತ್ಸವ ನಡೆಯಿತು. ರಾತ್ರಿಯಿಡೀ ಭಕ್ತರಿಂದ ವೃತಾಚರಣೆ, ಜಾಗರಣೆ, ಭಜನೆ ನಡೆಯಿತು.