ಪುತ್ತೂರು : ಮಹಾಶಿವರಾತ್ರಿ ದಿನವಾದ ಶನಿವಾರ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂಜಾನೆಯಿಂದಲೇ ನಡೆಯುತ್ತಿದೆ.

ಮಹಾಶಿವರಾತ್ರಿಯಂದು ಶಿವನಿಗೆ ವಿಶಿಷ್ಠ ಸೇವೆಯಾದ 108 ಸುತ್ತು ಪ್ರದಕ್ಷಿಣೆ ಮಾಡಲು ಭಕ್ತಾದಿಗಳು ಮುಂಜಾನೆಯಿಂದಲೇ ತೊಡಗಿಸಿಕೊಂಡಿದ್ದರು. ದೇವಸ್ಥಾನದ ಒಳಾಂಗಣದಲ್ಲಿ ಕಿಕ್ಕಿರಿದು ಭಕ್ತ ಸಮೂಹ ಸೇರಿದ್ದು, ಏಕಬಿಲ್ಷಂ ಸೇವೆಯಲ್ಲಿ ಪಾಲ್ಗೊಂಡರು.
ಶಿವರಾತ್ರಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 6.45 ರಿಂದ ಭಜನೆ, ಕುಣಿತ ಭಜನೆ. 8ರಿಂದ ಮಹಾರುದ್ರಯಾಗ, 9 ರಿಂದ ಶತರುದ್ರಾಭಿಷೇಕ, ಏಕ ಬಿಲ್ವಂ ಶಿವಾರ್ಪಣಂ ಸೇವೆ ನಡೆಯಿತು.

ಮಧ್ಯಾಹ್ನ 3 ಗಂಟೆಯಿಂದ ದೇವಸ್ಥಾನ ಎದುರಿನ ಗದ್ದೆಯ ಬಲಭಾಗದಲ್ಲಿರುವ ಪಂಚಾಕ್ಷರಿ ಮಂಟಪದಲ್ಲಿ ಶಿವನ ಕುರಿತ ಛದ್ಮವೇಷ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.