ಪುತ್ತೂರು : ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಪುತ್ತೂರು ನಗರಸಭೆಯ ಹೊರಗುತ್ತಿಗೆ ಕಾರ್ಮಿಕರಿಂದ ಸಾಂಕೇತಿಕ ಪ್ರತಿಭಟನೆ ಶನಿವಾರ ನಗರಸಭೆ ಎದುರು ನಡೆಸಯಿತು.
ಇತ್ತೀಚೆಗೆ ಕಾರ್ಮಿಕರ ಪ್ರತಿಭಟನೆ ಹಿನ್ನಲೆಯಲ್ಲಿ ನೇರಪಾವತಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಘೊಷಣೆ ಮಾಡಿಲ್ಲ ಎಂಬ ಕಾರಣಕ್ಕೆ ಹೊರಗುತ್ತಿಗೆ ಕಾರ್ಮಿಕರು ಸಹಿತ ಚಾಲಕರು ಸಾಂಕೇತಿಕ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಹೊರಗುತ್ತಿಗೆ ನೌಕರರ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, ಇತ್ತೀಚೆಗೆ ಬೇಡಿಕೆ ಈಡೇರಿಕೆಗಾಗಿ ಸಂಘದ ವತಿಯಿಂದ ನಡೆಸಿದ ಪ್ರತಿಭಟನೆ ಫಲವಾಗಿ ಚಾಲಕರು, ವಾಟರ್ ಮೆನ್, ಡಾಟಾ ಅಪರೇಟರ್ ಗಳು ಸಹಿತ ಹೊರಗುತ್ತಿಗೆ ನೌಕರರಾಗಿರುವ ಎಲ್ಲಾ ಕಾರ್ಮಿಕರನ್ನು ನೇರ ಪಾವತಿಗೊಳಪಡಿಸುವ ಕುರಿತು ಬಜೆಟ್ ನಲ್ಲಿ ಘೊಷಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಈ ಭರವಸೆ ಈಡೇರಲಿಲ್ಲ. ಈ ಕುರಿತು ಉತ್ತರ ಕರ್ನಾಟಕದ ಎಲ್ಲಾ ಹೊರಗುತ್ತಿಗೆದಾರರು ದಿಕ್ಕಾರ ಕೂಗಿದ್ದಾರೆ. ಆದರೆ ನಾವು ದಿಕ್ಕಾರ ಕೂಗುವುದಿಲ್ಲ. ಮಂದಿನ ತಿಂಗಳೊಳಗೆ ಮುಖ್ಯಮಂತ್ರಿಗಳು ನಮಗೆ ನೇರಪಾವತಿ ಮಾಡಿ ಕೊಡುವ ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಮ್ಮ ಪ್ರತಿಭಟನೆ ಸಾಂಕೇತಿಕ. ಮುಂದಿನ ತಿಂಗಳು ನಮ್ಮ ಬೇಡಿಕೆ ಈಡೇರಿಸದೇ ಹೋದರೆ ಪ್ರತಿಭಟನೆಯ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರಾದ ಅಮಿತ್ ರಾಜ್, ಕೂಸಪ್ಪ, ನಾಗೇಶ್ ಸಹಿತ ಹಲವಾರು ಮಂದಿ ಪಾಲ್ಗೊಂಡಿದ್ದರು.