ಪುತ್ತೂರು : ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 15 ನೇ ಹಣಕಾಸು ಯೋಜನೆಯಡಿ ಬನ್ನೂರಿನಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಕೋವಿಡ್ ನಂತರ ಎಲ್ಲಾ ಕ್ಷೆತ್ರದಲ್ಲಿಬದಲಾವಣೆ ಆಗುತ್ತಿದೆ. ಮನೆ ಬಾಗಿಲಿಗೆ ಡಾಕ್ಟರ್, ಮನೆ ಬಾಗಿಲಿಗೆ ಆಸ್ಪತ್ರೆ ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ಕಾರ್ಯಗಳನ್ನು ಸರಕಾರ ಮಾಡುತ್ತಿದೆ. ನಮ್ಮ ಕ್ಲಿನಿಕ್ ಮೂಲಕ ದಿನದ 8 ಗಂಟೆ ನಿಮ್ಮ ಅರೋಗ್ಯ ತಪಾಸಣೆ ಮಾಡುವ ಕೆಲಸ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ನಗರ ಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯೆ ಗೌರಿ ಬನ್ನೂರು, ದ. ಕ ಮಂಗಳೂರು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಕಿಶೋರ್ ಕುಮಾರ್, ದ.ಕ ಮಂಗಳೂರು ಜಿಲ್ಲಾ ಆರ್. ಇ. ಹೆಚ್ ಅಧಿಕಾರಿ ಡಾ ರಾಜೇಶ್ ಬಿ ವಿ, ಕ್ಷಯರೋಗ ನಿಯಂತ್ರಣಾಧಿಕಾರಿ, ಪುತ್ತೂರು ತಾಲೂಕು ನೋಡೆಲ್ ಅಧಿಕಾರಿ ಡಾ ಬದ್ರುದ್ದೀನ್ ಯಂ ಯನ್, ಉಪ್ಪಿನಂಗಡಿ ಸರಕಾರಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಕೃಷ್ಣನಂದ, ಪುತ್ತೂರು ತಾಲೂಕು ಅರೋಗ್ಯ ಅಧಿಕಾರಿ ಡಾ ದೀಪಕ್ ರೈ ಉಪಸ್ಥಿತರಿದ್ದರು. ರವಿ ಸ್ವಾಗತಿಸಿದರು.