ಬೆಂಗಳೂರು : 2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆಯಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುವೆಂಪು ಕವನದ ಮೂಲಕ ಬಜೆಟ್ ಮಂಡನೆ ಪ್ರಾರಂಭಿಸಿದರು. 25 ವರ್ಷಗಳ ದೂರದೃಷ್ಟಿಯ ಬಜೆಟ್ ಎಂದು ಸಿಎಂ ಹೇಳಿಕೆ ನೀಡಿದ್ದು, ಆದ್ಯತಾ ವಲಯಗಳಿಗೆ ಭರಪೂರ ಅನುದಾನ ನೀಡಿದ್ದಾರೆ.
ಕರ್ನಾಟಕ ಬಜೆಟ್‌ನ ಹೈಲೈಟ್ಸ್ ಇಂತಿದೆ:
- ಕಾಂಗ್ರೆಸ್, ಜೆಡಿಎಸ್ ಜನರ ಕಿವಿಗೆ ಹೂವಿಟ್ಟಿದೆ ಎಂಬ ಸಿಎಂ ಹೇಳಿಕೆಗೆ ವಿಪಕ್ಷ ಕೆಂಡಾಮಂಡಲ
- ರೈತರಿಗೆ 5 ಲ.ರೂ. ಶೂನ್ಯ ಬಡ್ಡಿದರದಲ್ಲಿ ಸಾಲ : 3 ಲ.ರೂ. ನಿಂದ 5 ಲಕ್ಷಕ್ಕೇರಿಕೆ-ರೈತರಿಗೆ ಬಂಪರ್ ಗಿಫ್ಟ್
- 30 ಲಕ್ಷಕ್ಕೂ ಅಧಿಕ ರೈತರಿಗೆ 25 ಕೋ. ರೂ. ಸಾಲ
- -ಬೆಂಗಳೂರು, ಹಾವೇರಿಯಲ್ಲಿ ಅತ್ಯಾಧುನಿಕ ಕೃಷಿ ಮಾರ್ಕೆಟ್
- ವಸತಿ ರಹಿತ ಮೀನುಗಾರರಿಗೆ ವಿಶೇಷ ಸೌಲಭ್ಯ
- ದೋಣಿಗಳಿಗೆ ಮೋಟಾರ್ ಇಂಜಿನ್ ಅಳವಡಿಕೆ
- ಗೃಹಿಣಿಯರಿಗೆ ಮಾಸಿಕ 500 ರೂ. ಸಹಾಯಧನ
- ಮೀನು ರಫ್ತಿಗೆ ಬೈಂದೂರಿನಲ್ಲಿ ಸೀಫೂಡ್ ಪಾರ್ಕ್ ಸ್ಥಾಪನೆ
- ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರದ ಮತ್ಸ್ಯಸಂಪದ ಯೋಜನೆ ಜಾರಿ
- ಶಾಲಾ-ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
- ನಮ್ಮ ನೆಲೆ ಹೆಸರಲ್ಲಿ 10 ಸಾವಿರ ಸೈಟ್ ವಿತರಣೆ
- ಆರ್ಥಿಕವಾಗಿ ಹಿಂದುಳಿದವರಿಗೆ ಹೊಸ ವಸತಿ ಯೋಜನೆ
- ಗ್ರಾಮ ಪಂಚಾಯತಿಗಳಿಗೆ ತಲಾ 10 ಲ. ರೂ. ಅನುದಾನ
- ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋ. ರೂ.
- ಬಳ್ಳಾರಿ ಮೆಗಾ ಡೇರಿಗೆ 100 ಕೋ. ರೂ. ಅನುದಾನ
- ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಹಾಯಧನ
- ರಾಮನಗರದಲ್ಲಿ ಬೃಹತ್ ರಾಮ ಮಂದಿರ ನಿರ್ಮಾಣ
- ಬೆಂಗಳೂರಿನಲ್ಲಿ ಬದುಕುವ ದಾರಿ- ಹೊಸ ಯೋಜನೆಯಲ್ಲಿ ಐಟಿಐ ಕೋರ್ಸ್
- ನೇಕಾರರು, ಮಿನುಗಾರ ಮಕ್ಕಳಿಗೂ ವಿದ್ಯಾನಿಧಿ ವಿದ್ಯಾರ್ಥಿ ವೇತನ
- ಅಟೋ, ಕಾರು ಚಾಲಕರಿಗೆ ಬಂಪರ್ ಕೊಡುಗೆ
- ಉತ್ತಮ ತಳಿ ಮೀನುಮರಿಗಳ ದಾಸ್ತಾನಿಗೆ 20 ಕೋ. ರೂ.
- ರೈತರಿಗೆ ಭೂ ಸಿರಿ- ಹೊಸ ಯೋಜನೆ
- 9556 ಹೊಸ ಶಾಲಾ ಕೊಠಡಿಗಳ ನಿರ್ಮಾಣ
- ಬಿಬಿಎಂಪಿ ವ್ಯಾಪ್ತಿಯ 125 ಗ್ರಾಮಗಳಲ್ಲಿ ರಸ್ತೆ ನಿರ್ಮಾಣ
- 38 ಕುಡಿಯುವ ನೀರು ಯೋಜನೆಗಳಿಗೆ ಅನುಮತಿ -11236 ಕೋ. ರೂ. ಅನುದಾನ
- ನರೇಗಾಕ್ಕೆ 1 ಸಾವಿರ ಕೋ. ರೂ. ಅನುದಾನ
- ಕಳಸಾ-ಬಂಡೂರಿ ನೀರಾವರಿ ಯೋಜನೆಗೆ 80 ಕೋ. ರೂ.
- ಎಲ್ಲ ವಿವಿಗಳಲ್ಲಿ ಕನ್ನಡದಲ್ಲಿ ಪರೀಕ್ಷೆಗೆ ವ್ಯವಸ್ಥೆ
- 47 ವಸತಿ ಶಾಲೆಗಳ ದುರಸ್ತಿ, ಸ್ಮಾರ್ಟ್ ಕ್ಲಾಸ್ ನಿರ್ಮಾಣ
- 180 ಕೊ .ರೂ. ವೆಚ್ಚದಲ್ಲಿ
- ಜೀವನ್ ಜ್ಯೋತಿ ವಿಮಾ ಯೋಜನೆ ಜಾರಿ
- ಬೆಂಗಳೂರು ಟ್ರಾಫಿಕ್ ಕಂಟ್ರೋಲ್‌ಗೆ 150 ಕೋ. ರೂ. -75 ಜಂಕ್ಷನ್ ಅಭಿವೃದ್ಧಿ
- ಆರ್ಟಿಫಿಶಿಯಲ್ ಇಂಟೆಲೆಜೆನ್ಸ್ ಮೂಲಕ ಟ್ರಾಫಿಕ್ ನಿರ್ವಹಣೆ
- 30 ಕಸ್ತೂರ್‌ಬಾ ಗಾಂಧಿ ವಸತಿ ಶಾಲೆಗಳಲ್ಲಿ ಹೈಟೆಕ್ ವ್ಯವಸ್ಥೆ
- ಶಾಲೆಗಳಲ್ಲಿ ಗ್ರಂಥಾಲಯ, ರೀಡಿಂಗ್ ರೂಂ ಸ್ಥಾಪನೆ- 20 ಕೋ. ರೂ.
- ಸೃಷ್ಟಿ ಟಿಂಕರಿಂಗ್ ಲ್ಯಾಬ್ ಸ್ಥಾಪನೆಗೆ ಕ್ರಮ
- ಕರಾವಳಿ ಜಿಲ್ಲೆಗಳಲ್ಲಿ ಆರ್ಟಿಫಿಶಿಯಲ್ ರೀಫ್ ಸ್ಥಾಪನೆ
- ಸೀಮೆಎಣ್ಣೆ ಸಹಾಯಧನ ಮುಂದುವರಿಕೆ
- ಚರಂಡಿ, ಕಿರು ಸೇತುವೆ ನಿರ್ಮಾಣಕ್ಕೆ 1,813 ಕೋ. ರೂ.
- ಬಳ್ಳಾರಿ, ರಾಯಚೂರಿನಲ್ಲಿ ಸಿಗಡಿ ಕೃಷಿ ಕ್ಲಸ್ಟರ್ ಸ್ಥಾಪನೆ
- 6 ಸಾವಿರ ಕೋ. ರು. ಕಾಮಗಾರಿ ಅನುಷ್ಠಾನ
- 50 ಲಕ್ಷ ಜನರಿಗೆ ಕಾವೇರಿ ನೀರು ಪೂರೈಕೆ
- 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು- 200 ಕೋ. ರೂ.
- 273 ಕೋ. ರೂ. ವೆಚ್ಚದಲ್ಲಿ 108 ಕಿ. ಮೀ. ರಸ್ತೆ ಅಭಿವೃದ್ಧಿ
- ಕೃಷಿಗೆ ಒಟ್ಟು 39,031 ಕೋ ರೂ. ಅನುದಾನ
- 73 ಕರ್ನಾಟಕ ಪಬ್ಲಿಕ್ ಶಾಲೆ, 50
- ಕರಾವಳಿ, ಮಲೆನಾಡಿಗೆ ಸಹ್ಯಾದ್ರಿ ಸಿರಿ ಯೋಜನೆ
- ಬಿಸಿ ಊಟ ಅಡುಗೆಯವರು, ಗ್ರಂಥಪಾಲಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರ ಗೌರವ ಧನ 1 ಸಾವಿರ ರೂ. ಹೆಚ್ಚಳ
- 100 ಸಮುದಾಯ ಆರೋಗ್ಯ ಕೇಂದ್ರ ಅಭಿವೃದ್ಧಿ
- 438 ನಮ್ಮ ಕ್ಲಿನಿಕ್ ಸ್ಥಾಪನೆ
- ಸಮುದಾಯ ಕೇಂದ್ರಗಳು ಮೇಲ್ದರ್ಜೆಗೆ
- ಆರೋಗ್ಯ ಕ್ಷೇತ್ರಕ್ಕೆ ಒಟ್ಟು 781 ಕೋ. ರೂ. ಅನುದಾನ
- ಜಯದೇವ ಸೇರಿ 45 ಆಸ್ಪತ್ರೆಗಳ ಮ್ಯಾಪಿಂಗ್
- ಹೊಸ ಬೋಟ್ ಖರೀದಿಗೆ 40 ಕೋ. ರೂ. ಅನುದಾನ
- ಮಕ್ಕಳ ಬಸ್ – ಹೊಸ ಯೋಜನೆ
- 1000 ಅಂಗನವಾಡಿ ಕಟ್ಟಡಗಳ ನಿರ್ಮಾಣ
- ಮೂರು ಜಿಲ್ಲೆಗಳಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಸ್ಥಾಪನೆ
- ಮನೆ ಮನೆಗೆ ಆರೋಗ್ಯ ಕಾರ್ಯಕ್ರಮ ಜಾರಿ -ಮನೆ ಬಾಗಿಲಿಗೆ ಔಷಧಿ ತಲುಪಿಸಲು ಕ್ರಮ
- ಹಾಲು ಉತಾದಕರ ನೆರವಿಗೆ 1067 ಕೋ. ರೂ.
- 69 ಸಾವಿರ ಬೀದಿ ವ್ಯಾಪಾರಿಗಳಿಗೆ
- ಕ್ಯಾನ್ಸರ್ ಪತ್ತೆ ಉಪಕರಣ ಖರೀದಿಗೆ 12 ಕೋ. ರೂ.
- _ 93 ಸ್ಟಾರ್ಟ್‌ಅಪ್‌ಗಳಿಗೆ ಸರಕಾರದ ಪ್ರೋತ್ಸಾಹ
- ಮಕ್ಕಳ ಆರೋಗ್ಯಕ್ಕೆ ವಾತ್ಸಲ್ಯ ಯೋಜನೆ
- ನಗು ಮಗು ಯೋಜನೆಗೆ 12.5 ಕೋರೂ. ಅನುದಾನ
- 28 ಹೊಸ ಆರೋಗ್ಯ ಕೇಂದ್ರಗಳ ಸ್ಥಾಪನೆ
- ಆರೋಗ್ಯ ಸಂಸ್ಥೆಗಳ ಕಾರ್ಯ ನಿರ್ವಹಣೆಗೆ 125 ಕೋ. ರೂ.
- ಬೆಂಗಳೂರಿನಲ್ಲಿ ಶಂಕರನಾಗ್ ಹೆಸರಿನಲ್ಲಿ ನಿಲ್ದಾಣ
- 65 ಹೊಸ ಪ್ರಾಥಮಿಕ ಅರೋಗ್ಯ ಕೇಂದ್ರಗಳ ಸ್ಥಾಪನೆ- 137 ಕೋ. ರೂ. ಅನುದಾನ
- ಚಿಕ್ಕಮಗಳೂರಲ್ಲಿ ಹೊಸ ವಿವಿ ಸ್ಥಾಪನೆ -ವ್ಯದ್ಯಕೀಯ ಉಪಕರಣ ಖರೀದಿಗೆ 59 ಕೋ. ರೂ.
- ರಾಯಚೂರಿನಲ್ಲಿ ಏಮ್ಸ್ ಮಾಡರಿ ಆಸ್ಪತ್ರೆ ಸ್ಥಾಪನೆ
- ನಾಲ್ಕು ಜಿಲ್ಲೆಗಳಲ್ಲಿ ಐವಿಎಫ್ ಕ್ಲಿನಿಕ್ ಸ್ಥಾಪನೆ
- ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ
- 6 ಹೊಸ ಇಎಸ್‌ಐ ಆಸ್ಪತ್ರೆ ಸ್ಥಾಪನೆ
- 7 ಹೊಸ ವಿವಿ ಸ್ಥಾಪನೆ
- ಶಿಕ್ಷಕರ ಆರೋಗ್ಯ ಮತ್ತು ಪೌಷ್ಟಕತೆಗೆ 3000 ಕೋ. ರೂ.
- 73 ಕರ್ನಾಟಕ ಪಬ್ಲಿಕ್ ಸ್ಕೂಲ್ : 50 ಆದರ್ಶ ವಿದ್ಯಾಲಯ ಸ್ಥಾಪನೆ
- ಉಡುಪಿ, ದ,ಕ. ಶಿವಮೊಗ್ಗದಲ್ಲಿ ವಸತಿ ಶಾಲೆ ಸ್ಥಾಪನೆ – 18 ಕೋ.ರೂ. ವೆಚ್ಚದಲ್ಲಿ ನಾರಾಯಣ ಗುರು ವಸತಿ ಶಾಲೆ
- 50 ಕನಕದಾಸ ವಸತಿ ಶಾಲೆ
- ಅಲ್ಪಸಂಖ್ಯಾತರಿಗೆ ಅಬ್ದುಲ್ ಕಲಾಂ ವಸತಿ ಶಾಲೆ
- ಕರಗಕ್ಕೆ ಹೆಚ್ಚಿನ ಪ್ರೋತ್ಸಾಹ
- 69 ಸಾವಿರ ಬೀದಿ ವ್ಯಾಪಾರಿಗಳಿಗೆ 70 ಕೋ. ರೂ. ಸಾಲ
- ಸಂತ ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಗೆ 5 ಕೋ. ರೂ.
- ಚನ್ನಗಿರಿ ಷಹಾಜಿ ಸಮಾಧಿ ಭಿವೃದ್ಧಿಗೆ 5 ಕೋ. ರೂ.
- ಬೆಂಗಳೂರು ಅಭಿವೃದ್ಧಿಗೆ ಒಟ್ಟು 9,698 ಕೋ. ರೂ. ಅನುದಾನ
- ಮಾರುಕಟ್ಟೆ , ಜನನಿಬಿಢ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ
- ಉಡುಪಿ ಜಿಲ್ಲೆಯಲ್ಲಿ ಯಕ್ಷ ರಂಗಾಯಣ ಸ್ಥಾಪನೆ
- ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ
- ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ನೀತಿ ಜಾರಿ
- ಯುವ ಜನರ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ
- ಪೊಲೀಸ್ ಇಲಾಖೆ ಬಲವರ್ಧನೆ
- ಸಂಸ್ಕೃತಿ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ
- ಒಳಚರಂಡಿಗೆ 1813 ಕೋ. ರೂ. ಅನುದಾನ
- ಪೊಲೀಸ್ ಸಿಬ್ಬಂದಿ ವಾಹನ ಖರೀದಗೆ 50 ಕೋ. ರೂ.
- ಎಲ್ಲ ಜಿಲ್ಲಾ, ತಾಲೂಕು ಸ್ಟೇಡಿಯಂಗಳಲ್ಲಿ ಜಿಮ್ ಸ್ಥಾಪನೆ- ಯುವಕರು ಮಹಿಳೆಯರು, ವಿಶೇಷ ಚೇತನರಿಗೆ- 100 ಕೋ. ರೂ. ಅನುದಾನ.
- ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಕೋ. ರೂ. ಪ್ರೋತ್ಸಾಹ ಧನ
- 2000 ಪೌರ ಕಾರ್ಮಿಕರ ನೇಮಕಾತಿ
- ದೇಸಿ ಕ್ರೀಡೆಗಳ ಆಯೋಜನೆಗೆ ಅಂಕಣ ನಿರ್ಮಾಣ
- ಕರ್ನಾಟಕ ಒಲಿಂಪಿಕ್ಸ್ ಕನಸಿನ ಯೋಜನಾ ನಿಧಿ ಸ್ಥಾಪನೆ
- ಎಸ್‌ಸಿ ಎಸ್‌ಟಿ ನಿಗಮಗಳೀಗೆ 795 ಕೋ. ರೂ. ಅನುದಾನ
- ಅಮರ್ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ -ಎಸ್‌ಸಿ ಎಸ್‌ಟಿಯವರಿಗೆ ಉಚಿತ ವಿದ್ಯುತ್
- ಮಹದಾಯಿ ಯೋಜನೆಗೆ 1,000 ಕೋ. ರೂ.
- ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 100 ಕೋ. ರೂ.
- ಧಾರ್ಮಿಕ ಪ್ರವಾಸಿ ತಾಣಗಳ ಅಭಿವೃದ್ಧಿ
- ನೇಕಾರರ ಮಗ್ಗಗಳಿಗೆ ಉಚಿತ ವಿದ್ಯುತ್
- ಮೆಟ್ರಿಕ್ ನಂತರದ 100 ವಿದ್ಯಾರ್ಥಿ ನಿಲಯ ಮೇಲ್ದರ್ಜೆಗೆ
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಭರಪೂರ ಕೊಡುಗೆ
- ಗ್ರಾಮೀಣ ವಿದ್ಯಾರ್ಥಿಗಳಿಗೆ ಹಳ್ಳಿ ಮುತ್ತು ಯೋಜನೆ
- ಗ್ರಾಮೀಣ ಭಾಗದ ಅತ್ಯುತ್ತಮ 500 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು
- 300 ಪದವೀಧರ ಮಹಿಳೆಯರಿಗೆ ಐಐಎಂಬಿ ತರಬೇತಿ – ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ
- ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 110 ಕೋ. ರೂ.
- ವಕ್ಪ್ ಆಸ್ತಿ ರಕ್ಷಣೆಗೆ 10 ಕೋ. ರೂ
- ಖಬರಸ್ಥಾನ್ ಅಭಿವೃದ್ಧಿಗೆ 10 ಕೋ. ರೂ
- ಕಿರುಧಾನ್ಯ ಬೆಳೆಗಾರರಿಗೆ 10 ಕೋ. ರೂ. ಸಹಾಯಧನ
- ಮಠ-ಮಂದಿರಗಳ ಅಭಿವೃದ್ಧಿಗೆ 1000 ಕೋ. ರೂ. ಅನುದಾನ
- ದೇವಸ್ಥಾನಗಳ ಅಭಿವೃದ್ಧಿಗೆ 475 ಕೋ. ರೂ. ಮೀಸಲು
- 3.36 ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ವಿತರಣೆ
- ಮನೆಗಳ ಪುನರ್ ನಿರ್ಮಾಣಕ್ಕೆ 2,267 ಕೋ. ರೂ.
- ನೆರೆ ಸಂತ್ರಸ್ತರ ಮನೆಗಳ ಪುನರ್ ನಿರ್ಮಾಣಕ್ಕೆ 2,267 ಕೋ. ರೂ.
- 5 ಲಕ್ಷ ಮನೆಗಳ ನಿರ್ಮಾಣಕ್ಕೆ 5000 ಕೋ. ರೂ.
- ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ
- 48 ಸಾವಿರ ನಿವೇಶನ ಹಂಚಿಕೆ
- ಮುಧೋಳ ಶ್ವಾನ ತಳಿ ಅಭಿವೃದ್ಧಿಗೆ 5 ಕೋ. ರೂ.
- ಪ್ರವಾಸಿ ತಾಣಗಳ ಗೈಡ್‌ಗಳ ಪ್ರೋತ್ಸಾಹ ಧನ 5 ಸಾವಿರಕ್ಕೇರಿಕೆ
- ಮಾರಣಾಂತಿಕ ಕಾಯಿಲೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಆರ್ಥಿಕ ಭದ್ರತೆ ಜೊತೆಗೆ ಸ್ವಯಂ ನಿವೃತ್ತಿ ಅವಕಾಶ
- ಕರ್ನಾಟಕ ಮೆದುಳು ಆರೋಗ್ಯ ಯೋಜನೆಯನ್ನು 25 ಕೋಟಿ ರೂ ವೆಚ್ಚದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಣೆ
- ಜಗಳೂರು ಸೇರಿದಂತೆ ವಿವಿಧ ಕೆರೆಗಳನ್ನು ತುಂಬಿಸಲು ಕ್ರಮ. 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು
- ಎಲ್ಲಾ ಜಿಲ್ಲೆಗಳಲ್ಲಿ ಹ್ಯಾಂಡ್ ಹೋಲ್ಡ್ ಎಕ್ಸ್ರೇ ಯಂತ್ರಗಳ ಸಹಾಯದಿಂದ ಕ್ಷಯ ರೋಗಿಗಳ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸಮುದಾಯ ಆಧಾರಿತ ತಪಾಸಣೆ ಚಟುವಟಿಕೆ ನಡೆಸಲು 12.50 ಕೋಟಿ ರೂ. ಅನುದಾನದ ಬಗ್ಗೆ ಪ್ರಸ್ತಾಪ
- ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ
- ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 4,822 ಕೋಟಿ ರೂ. ಒಟ್ಟಾರೆ 15,752 ಕೋಟಿ ರೂ. ಗಳನ್ನು ರೈತರ ಖಾತೆಗೆ ನೇರ ಜಮೆ
- ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯಸಿರಿ ಎಂಬ ಯೋಜನೆ ಆರಂಭ, ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಜತೆ ಸಮನ್ವಯಗೊಳಿಸಿ ಈ ಯೋಜನೆ ಜಾರಿ
- ಬೆಂಗಳೂರಿನಲ್ಲಿ ಭುವನೇಶ್ವರಿ ಥೀಮ್ ಪಾರ್ಕ್
- ವನ್ಯಪ್ರಾಣಿಗಳಿಂದ ಪ್ರಾಣ ಹಾನಿಗೆ 15 ಲಕ್ಷ ರೂ. ಪರಿಹಾರ
- ಕನ್ನಡ ಚಿತ್ರ ರಂಗಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಎರಡನೇ ಹಂತದ ನಗರಗಳಲ್ಲಿ 100ರಿಂದ 200 ಆಸನಗಳುಳ್ಳ ಮಿನಿ ಥಿಯೇಟರ್ಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುವುದು.
- ಅಸಂಘಟಿತ ಕಾರ್ಮಿಕರಿಗೆ 4 ಲಕ್ಷ ರೂ. ವಿಮೆ
- ಕೆಎಸ್ಆರ್ಟಿಸಿ ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ ವಿಮೆ