ಪುತ್ತೂರು : ರಾಜ್ಯದಲ್ಲಿ ಸ್ಥಳೀಯ ಆಡಳಿತ ಸುಗಮವಾಗಿ ನಡೆಯಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳಲ್ಲಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕಾಗಿದ್ದು, ರಾಜ್ಯ ಸರಕಾರ ಈ ಹುದ್ದೆಗಳನ್ನು ಭರ್ತಿ ಮಾಡುವ ಸಾಧ್ಯತೆ ಕಂಡು ಬರುತ್ತಿದೆ.
ರಾಜ್ಯಾದ್ಯಂತ ಸ್ಥಳಿಯ ಆಡಳಿತದಲ್ಲಿ ಸುಧಾರಣೆ ಮಾಡುವ ಸಲುವಾಗಿ ಶೀಘ್ರದಲ್ಲೇ 570 ಪಿಡಿಒ ನೇಮಕ ಮಾಡಲು ಕ್ರಮ ಕೈಗೊಳ್ಳುವ ಭರವಸೆಯನ್ನು ವಿಧಾನಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಪಿಡಿಒ ಹುದ್ದೆಗಳ ಕೊರತೆಯಿರುವುದರಿಂದ ಓರ್ವ ಪಿಡಿಓಗೆ ಪಂಚಾಯಿತಿ ಜವಾಬ್ದಾರಿ ನಿರ್ವಹಿಸಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಹಳ್ಳಿಯ ಜನರು ತಮ್ಮ ಕೆಲಸ ಕಾರ್ಯಗಳಿಗೆ ಪಿಡಿಒಗಳ ಬಳಿ ತಮ್ಮ ಕೆಲಸ ಕಾರ್ಯಗಳು ಮಾಡಿಸಿಕೊಳ್ಳಲು ಪಿಡಿಒಗೆ ಕಾದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಶೀಘ್ರ ನೇಮಕಾತಿ ಪ್ರಕ್ರಿಯೆ ನಡೆಸುವ ನಿರೀಕ್ಷೆಯಿದೆ.
ಒಟ್ಟು ಪಿಡಿಒ ಹುದ್ದೆಗಳು ಖಾಲಿ ಇರುವುದು 727
ವಿದ್ಯಾರ್ಹತೆ, ವಯೋಮಿತಿ : ಪಿಡಿಒ ಹುದ್ದೆಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಯಾವುದೇ ಪದವಿ ಪಾಸ್ ಆಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷಗಳಾಗಿದ್ದು, ಗರಿಷ್ಠ 35 ವರ್ಷ ಮೀರಿರಬಾರದು. ಒಬಿಸಿಗೆ 3 ವರ್ಷ, ಎಸ್ ಸಿ/ಎಸ್ ಟಿ/ಪ್ರವರ್ಗ- ಅಭ್ಯರ್ಥಿ್ಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.
ಮಾಸಿಕ ವೇತನ : 36,300
ನೇಮಕಾತಿ ಪ್ರಕ್ರಿಯೆ : ಪಿಡಿಒ ಹುದ್ದೆಗೆ ಕರ್ನಾಟಕ ಪ್ರಾಧಿಕಾರದ ಮೂಲಕ ಲಿಖಿತ ಪರೀಕ್ಷೆ ನಡೆಸಿದ ಬಳಿಕ ಗಳಿಸಿದ ಅಂಕಗಳ ಆಧಾರದ ಅನುಸಾರ ಮೀಸಲಾತಿಯನ್ನು ಪರಿಗಣಿಸಿ ಹುದ್ದೆಗಳಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.