ಪುತ್ತೂರು : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಪ್ರಯುಕ್ತ ಮರದ ಮುಹೂರ್ತ ಮಚ್ಚಿಮಲೆ ರಾಮಭಟ್ ಅವರ ಜಾಗದಲ್ಲಿ ನೆರವೇರಿತು.
ಕಿರಾಲುಬೋಗಿ ಮರಕ್ಕೆ ಪೂಜೆಗೈದು ಪ್ರಾರ್ಥಿಸಿ, ಮರದ ಶಿಲ್ಪಿ ಮೂಲಕ ಕೊಡಲಿ ಹಾಕುವ ಮುಹೂರ್ತ ನಡೆಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಭಕ್ತಾದಿಗಳು ಪಾಲ್ಗೊಂಡಿದ್ದರು.