ಪುತ್ತೂರು : ಬಲಿ ಭಾಗವತರೆಂದೇ ಖ್ಯಾತರಾದ ತೆಂಕುತಿಟ್ಟಿನ ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ (84) ಗುರುವಾರ ಸಂಜೆ 6.30 ಕ್ಕೆ ಸ್ವಗೃಹದಲ್ಲಿ ಅಸ್ತಂಗತರಾದರು.
ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆಯವರು. ಪ್ರಸ್ತುತ ಬಲಿಪ ನಾರಾಯಣ ಭಾಗವತರು ಮೂಡಬಿದ್ರೆಯ ನೂಯಿ ಎಂಬಲ್ಲಿ ವಾಸವಾಗಿದ್ದರು. ಮಾ.13, 1938 ರಲ್ಲಿ ಜನಿಸಿದ್ದ ಬಲಿಪರು ತನ್ನ 13ನೇ ವಯಸ್ಸಿನಲ್ಲೇ ಯಕ್ಷರಂಗಕ್ಕೆ ಕಾಲಿಟ್ಟಿದ್ದರು. ಸುಮಾರು 60 ವರ್ಷಗಳ ಕಲಾ ಸೇವೆ ಮಾಡಿರುವ ಅವರು, ಕಟೀಲು ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಹಲವು ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನಕ್ಕೆ ಸಂಬಂಧಪಟ್ಟ ಅನೇಕ ಹಾಡುಗಳನ್ನು ರಚಿಸಿದ್ದಾರೆ.
ಪಡ್ರೆ ಜಠಾಧಾರಿ ಮೇಳವನ್ನು ಆರಂಭಿಸಿದ್ದರು. ನ್ನು ತೆಂಕುತಿಟ್ಟಿನ ಯಕ್ಷಗಾನ ಭೀಷ್ಮ ಎಂದೇ ಕರೆಯುತ್ತಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕವಿ ಮುದ್ದಣ ಪುರಸ್ಕಾರ ಸಹಿತ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿದೆ. ಗುರುವಾರ ರಾತ್ರಿ 1.30 ರ ಸುಮಾರಿಗೆ ಅವರ ಅಂತಿಮ ವಿಧಿವಿಧಾನಗಳು ಸ್ವಗೃಹದಲ್ಲಿ ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.