ಪುತ್ತೂರು: ಸವಣೂರು ಕಿನಾರ ದಿ. ಸಂಕಪ್ಪ ಶೆಟ್ಟಿಯವರ ಪತ್ನಿ ವಾರಿಜ ಶೆಟ್ಟಿ (75 ವ) ಫೆ. 15ರಂದು ಬೆಳಿಗ್ಗೆ ನಿಧನರಾದರು.
ಮೃತರು ಪುತ್ರರಾದ ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ ಕಿನಾರ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ಪುತ್ರಿಯರಾದ ಜಯಶ್ರೀ, ವಸಂತಿ, ಉಷಾ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.
ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ:
ಫೆ. 15ರಂದು ಮಧ್ಯಾಹ್ನ ಗಂಟೆ 12ಕ್ಕೆ ಮೃತರ ಅಂತ್ಯಸಂಸ್ಕಾರ ಸವಣೂರಿನ ಕಿನಾರ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.