ಪುತ್ತೂರು: ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಫೆ. 15ರಂದು 20ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರಮದಾನ ಹಾಗೂ ಬಲ್ನಾಡು ಘಟಕದ ಮಾಸಿಕ ಸಭೆ ನಡೆಯಿತು.
ಫೆ. 15ರಂದು ಮಂದಿರದಲ್ಲಿ ಸಾಮೂಹಿಕ ದುರ್ಗಾ ಪೂಜೆ ಮತ್ತು ಅರ್ಧ ಏಕಾಹ ಭಜನೆ ನಡೆಯಲಿದೆ.
ಮಾಸಿಕ ಸಭೆ:
ಇದೇ ಸಂದರ್ಭ ಬಲ್ನಾಡು ಘಟಕದ ಮಾಸಿಕ ಸಭೆ ನಡೆಯಿತು. ಲೆಕ್ಕಪರಿಶೋದಕಿ ಲತಾ, ವಲಯ ಮೇಲ್ವಿಚಾರಕ ಹರೀಶ್ ಮಾಹಿತಿ ನೀಡಿದರು.
ಘಟಕದ ಸಂಯೋಜಕಿ ಆಶಾಲತಾ, ಪ್ರತಿನಿಧಿ ವಿನಯ, ಸದಸ್ಯರಾದ ಬಾಲಕೃಷ್ಣ, ಶಂಭು ಪೂಜಾರಿ, ಹರಿಪ್ರಸಾದ್, ಸುನೀಲ್, ರೋಷನ್, ಜಗದೀಶ, ನವೀನ, ವಿನೋದ್ ಬಂಗಾರಡ್ಕ, ಲೋಕೇಶ್, ಅರುಣಾ, ಸಂಧ್ಯಾ, ರೇಣುಕಾ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಸಮಿತಿ ವತಿಯಿಂದ ಫಲಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಯಿತು.