ಪುತ್ತೂರು : ಪೂರ್ವಿಕರು ಕೊಟ್ಟ ಔಷಧೀಯ ಜ್ಞಾನವನ್ನು ಇಂದು ಯುವಜನಾಂಗ ಅರಿಯಬೇಕಿದೆ. ಆಟಿ ಅಮಾವಾಸ್ಯೆಯಿಂದ ಆರಂಭಿಸಿ ಬಲೀಂದ್ರ ಪೂಜೆಯವರೆಗೆ ಬಳಸಬೇಕಾದ ಪಾಲೆಯ ಮರವನ್ನು ಮರೆತು ಇನ್ಯಾವುದೋ ಇಂಗ್ಲೀಷ್ ಔಷಧಿಯತ್ತ ನಾವು ಗಮನಹರಿಸುತ್ತಿರುವುದು ಬೇಸರದ ಸಂಗತಿ ಎಂದು ಕಾರ್ಕಳ ಕರ್ನಾಟಕ ರಾಜ್ಯ ಔಷಧೀಯ ಗಿಡಮೂಲಿಕ ಪ್ರಾಧಿಕಾರದ ಜೀವವೈವಿಧ್ಯ ಮಂಡಳಿ ಸಂಚಾಲಕ ಡಾ.ಸತ್ಯನಾರಾಯಣ ಭಟ್ ಅಭಿಪ್ರಾಯಪಟ್ಟರು.
ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ, ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿ?ನ (ಎಆರ್‌ಡಿಎಫ್) ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಹಾಗೂ ಮಂಗಳೂರು ವಿವಿ ಮಂಗಳಗಂಗೋತ್ರಿ ಸಂಯುಕ್ತ ಆಶ್ರಯದಲ್ಲಿ ನಡೆದ 5ನೇ ಬೃಹತ್ ಕೃಷಿ ಯಂತ್ರ ಮೇಳ -2023 ಮತ್ತು ಕನಸಿನ ಮನೆ ಕಾರ್ಯಕ್ರಮದಲ್ಲಿ ಅಡಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಔಷಧೀಯ ಸಸ್ಯಗಳು ಕುರಿತ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಪ್ರತಿಯೊಬ್ಬ ಕೃಷಿಕನ ಅಡಿಕೆ ತೋಟದಲಿ ಔಷಧೀಯ ಗಿಡ ಮರಗಳನ್ನು ಬೆಳೆಸಬೇಕು. ಹೀಗೆ ಬೆಳೆಸಿದ್ದಲ್ಲಿ ನಮಗೆ ಬರುವ ಅನೇಕ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ನಮ್ಮ ಮನೆಯಂಗಳದಲ್ಲಿ ನಾವೇ ಔಷಧಿಯನ್ನು ತಯಾರಿಸಿದ ತೃಪ್ತಿ ನಮಗಿರುತ್ತದೆ ಎಂದು ಎರ್ಪೆ ಮರದ ಎಲೆ,ಪಾಳೆಯ ಮರದ ಕೆತ್ತೆ, ತುಳಸಿ, ಮಾಫಲ, ಕದಂಬ ಮರ, ಇಪ್ಪೆಮರ, ಓಟೆಹುಳಿ,ಲಾವಂಚ ಇವೆಲ್ಲದರ ಔಷಧೀಯ ಮಹಿಮೆಯನ್ನು ಉದಾಹರಣೆ ಸಹಿತ ವಿವರಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ನಿರೂಪಿಸಿದ ಕೃಷಿಯಂತ್ರ ಮೇಳದ ವಿಶೇಷ ಸಂಚಿಕೆ ವಿಕಸನ ವನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್‌ರಾವ್ ಪಿ, ಕಾರ್ಯದರ್ಶಿ ಕೆ.ಎಂ ಕೃಷ್ಣ ಭಟ್, ಕ್ಯಾಂಪ್ಕೋ ನಿದೇಶಕರಾದ ಶಂಕರನಾರಾಯಣ ಭಟ್‌ಖಂಡಿಗೆ, ಕೃಷ್ಣಕುಮಾರ್, ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೊ.ತೇಜಸ್ವಿನಿ ಹೆಚ್. ಪಿ ನಿರೂಪಿಸಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆಡಾ| ಶ್ವೇತಾಂಬಿಕಾ ಪಿ ವಂದಿಸಿ, ಸುಮನಾ ಹಾಗೂ ಅನಘಾ ಪ್ರಾರ್ಥಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕೃಷಿ ಸಂಬಂಧಿತ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಫಲಿತಾಂಶ : ಪ್ರ : ಪ್ರಜ್ವಲ್ ಮತ್ತು ಮನ್ವಿತ್, ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯ,, ದ್ವಿ : ಶರಣ್ಯ ಮತ್ತು ಸುಶ್ಮಿತಾ, ವಿವೇಕಾನಂದ ಕಾಲೇಜು ಎಂಕಾಂ ವಿಭಾಗ, ತೃ : ಗೌತಮಿ ಕಾಯರ್ಗ, ಜಸ್ಮಿತಾ ಕಾಯರ್ಗ, ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯ,
ಸಾರ್ವಜನಿಕ ವಿಭಾಗ : ಪ್ರ : ಸಂತೋಷ್ ಕುಮಾರ್ ಕೆದಂಬಾಡಿ, ದ್ವಿತೀಯ : ಸತ್ಯಶಂಕರ್ ಚೂಂತಾರು, , ತೃ : ವಸಂತ ಎನ್.