ಪತ್ನಿ ಬೆಂಗಳೂರಿಗೆ ತೆರಳಿದ ವೇಳೆ ಕೃತ್ಯ
ಬೆಳಗಾವಿ : ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟೆ ಅವರ ಪತಿ ಜಾಫರ್ ಫಿರಜಾದೆ (39) ಎಂಬವರು ನಿನ್ನೆ ರಾತ್ರಿ ಬೆಳಗಾವಿಯ ಅಜಮ್ ನಗರದ ಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫಿರಜಾದೆ ಕಂದಾಯ ನಿರೀಕ್ಷಕರಾಗಿದ್ದರು.
ರೇಷ್ಮಾ ತಾಳಿಕೋಟೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಿರಜಾದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಲೀಸಿದ್ದಾರೆ. ಬೆಳಗಾವಿ ಎಪಿಎಂಸಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರೇಷ್ಮಾ ತಾಳಿಕೋಟೆ ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಜಾಫರ್ ಫಿರಜಾದೆ ಸಂಗಮೇಶ್ ನಗರದಲ್ಲಿರುವ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಭಾನುವಾರ ರೇಷ್ಮಾ ತಾಳಿಕೋಟೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಜಾಫರ್ ಫಿರಜಾದೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.