ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಶಿವನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿಯಂದು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆಯುಕ್ತರ ಸೂಚನೆ

ಪುತ್ತೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ಶಿವನ ದೇವಸ್ಥಾನಗಳಲ್ಲಿ ಫೆ.18ರಂದು ಮಹಾ ಶಿವರಾತ್ರಿ ಹಬ್ಬದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ಭರಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಶಿವರಾತ್ರಿಯ ಹಬ್ಬದ ದಿನದಂದು ವಿಶೇಷವಾಗಿ ಸಂಕಲ್ಪಿಸಿ ಆ ದಿನ ಪ್ರಾಂತ: ಕಾಲದಿಂದ ಮಧ್ಯಾಹ್ನದವರೆಗೆ ಯಾವುದಾದರೊಂದು ಸೂಕ್ತ ಸಮಯದಲ್ಲಿ ದೇವಾಲಯದ ದೈನಂದಿನ ಪೂಜಾವಿಧಿಗಳಿಗೆ ಧಕ್ಕೆಯಾಗದಂತೆ ರುದ್ರಾಭಿಷೇಕ ಮತ್ತು ರುದ್ರ ಹೋಮ ಪೂಜಾಕಾರ್ಯಗಳನ್ನು ವಿಶೇಷವಾಗಿ ನಡೆಸುವುದು. ಮರೆಯಾಗುತ್ತಿರುವ ಸಾಂಸ್ಕೃತಿಕ ಕಲೆಗಳಾದ ಗೊಂಬೆ ಆಟ (ಗೊಂಬೆ ನಾಟಕ) ಕೋಲಾಟ ಇವುಗಳನ್ನು ನಡೆಸುವ ಬಗ್ಗೆ ಸಂಬಂಧಪಟ್ಟ ಕಲಾವಿದರ ಲಭ್ಯತೆ ತಿಳಿದು ಇವುಗಳನ್ನು ಆಯೋಜಿಸುವುದು., ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ವೀರಭದ್ರ ಕುಣಿತ ಡೊಳ್ಳು ಕುಣಿತ, ದೇಸೀಯ ವಾದ್ಯಗಳು ಭರತನಾಟ್ಯ, ಭಕ್ತಿ ಗೀತೆಗಳು ಸಾಂಪ್ರದಾಯಿಕ ಜಾನಪದ ಕಲೆಗಳು ಪಾರಂಪರಿಕ ಸ್ಥಳೀಯ ಕಿರು ನಾಟಕಗಳಾದ ದಕ್ಷಯಜ್ಞ ಶನಿ ಮಹಾತ್ಮೆ ಮುಂತಾದ ಶಿವ ಸಂಬಂಧ ಕಿರು ನಾಟಕಗಳು ಹಾಗೂ ಶಿವ ಪುರಾಣ ಕಥಾ ಶ್ರವಣ ಮುಂತಾದವುಗಳನ್ನು ಆಯೋಜಿಸುವುದು., ಈ ಸಾಂಸ್ಕೃತಿಕ ಕಲೆಗಳು ಲಭ್ಯವಾಗದಿದ್ದಲ್ಲಿ ಸ್ಥಳಿಯವಾಗಿ ಆಯಾಯ ಪ್ರಾಂತ್ಯಗಳಲ್ಲಿ ಜಿಲ್ಲೆಗಳಲ್ಲಿ ಮರೆಯಾಗುತ್ತಿರುವ ಯಾವುದಾದರೊಂದನ್ನು ಲಭ್ಯವಾಗಬಹುದಾದ ಸಾಂಸ್ಕೃತಿಕ ಕಲೆ /ಧಾರ್ಮಿಕ ಕಲೆಯನ್ನು ಗಮನಿಸಿ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಅದಕ್ಕನುಗುಣವಾಗಿ ಪೂರ್ವ ಸಿದ್ಧತೆ, ವ್ಯವಸ್ಥೆಗಳನ್ನು ಮಾಡಿಕೊಂಡು ಶಿವರಾತ್ರಿ ಹಬ್ಬದ ದಿನದಂದು ವಿಶೇಷವಾಗಿ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top