ಪುತ್ತೂರು : ಬನ್ನೂರು ಸ್ಪೂರ್ತಿ ಮೈದಾನದಲ್ಲಿರುವ ಶ್ರೀ ಶನಿದೇವರ ಸನ್ನಿಧಿಯಲ್ಲಿ 18ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಸ್ಪೂರ್ತಿ ಯುವಕ, ಯುವತಿ ಮಂಡಲ, ಮಹಿಳಾ ಮಂಡಲ ಹಾಗೂ ಬಾಲಸಭಾದ 33ನೇ ವಾರ್ಷಿಕೋತ್ಸವ ಶನಿವಾರ ನಡೆಯಿತು.
ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶನೀಶ್ವರ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಶ್ರೀ ಮಹಿಷಮರ್ದಿನಿ ಮಹಿಳಾ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಸಂಜೆ ಅಂಗನವಾಡಿ ಪುಟಾಣಿಗಳು, ಶಾಲಾ ಮಕ್ಕಳು ಹಾಗೂ ಸಂಘ ಸಂಸ್ಥೆಗಳ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರಗಿತು.
ಸಂಜೆ ನಡೆದ ಸ್ಪೂರ್ತಿ ಯುವಕ, ಯುವತಿ,ಮಹಳಾ ಹಾಗೂ ಬಾಲಸಭಾ ವಾರ್ಷಿಕೋತ್ಸವ ಸಮಾರಂಭವನ್ನು ನ್ಯಾಯವಾದಿ ಮನೋಹರ ಉದ್ಘಾಟಿಸಿ, ಸಂಸ್ಥೆಯು ಧಾರ್ಮಿಕ ಹಾಗೂ ಸಾಮಾಜಿಕವಾಗಿ ತೊಡಗಿಸಿಕೊಂಡು ಎಲ್ಲಿಗೂ ಸ್ಪೂರ್ತಿಯಾಗಿದೆ. ಶನೀಶ್ವರ ದೇವರ ಸಾನಿಧ್ಯವೂ ಇಲ್ಲಿರುವ ಮೂಲಕ ಕಾರಣಿಕ ಕ್ಷೇತ್ರವಾಗಿ ಭಕ್ತರು ಬರುವ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ನಗರಸಭಾ ಸದಸ್ಯೆ ಗೌರಿ ಬನ್ನೂರು, ರೈ ಉದ್ಯಮಿ ಅಶೋಕ್ ಕುಮಾರ್ ರೈ ಶುಭ ಹಾರೈಸಿದರು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ, ಸ್ಪೂರ್ತಿ ಯುವ ಸಂಸ್ಥೆಗಳ ಸಂಚಾಲಕ ದಿನೇಶ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಪೂರ್ತಿ ಯುವತಿ ಮಂಡಲದ ಅಧ್ಯಕ್ಷೆ ಲಾವಣ್ಯ ಅಧ್ಯಕ್ಷತೆ ವಹಿಸಿದ್ದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯೋಜಕ ಶ್ರೀಕಾಂತ್ ಬಿರಾವು, ಯುವಕ ಮಂಡಲ ಅಧ್ಯಕ್ಷ ಸೂರ್ಯ, ಬಾಲಸಭಾ ಅಧ್ಯಕ್ಷ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕ ಕೋಟಿಯಪ್ಪ ಪೂಜಾರಿ ಅವರಿಗೆ ಸ್ಪೂರ್ತಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾನ್ವಿ, ಲಿಖಿತಾ, ಯಜ್ಞ ಪ್ರಾರ್ಥಿಸಿದರು. ಯುವಕ ಮಂಡಲ ಕಾರ್ಯದರ್ಶಿ ಆದರ್ಶ ಸಾಲಿಯಾನ್ ವಂದಿಸಿದರು. ಗೌರವ ಸಲಹೆಗಾರರಾದ ದೇವಿಕಾ, ಅಮರನಾಥ ಕಾರ್ಯಕ್ರಮ ನಿರೂಪಿಸಿದರು. ಬಳಿ ಉಬಾರ್ ಗಯಾಪದ ಕಲಾವಿದರಿಂದ ಏತ್ ಪಂಡಲ ಅತೆ ತುಳು ನಾಟಕ ಪ್ರದರ್ಶನಗೊಂಡಿತು.