ಅಮಿತ್ ಶಾ ಆಗಮನಕ್ಕೆ ಬಿಗಿ ಭದ್ರತೆ ಹೀಗಿದೆ | ಪಾರ್ಕಿಂಗ್, ಊಟದ ವ್ಯವಸ್ಥೆ ಬಗ್ಗೆಯೂ ಇಲ್ಲಿದೆ ಮಾಹಿತಿ

ಪುತ್ತೂರು : ಪ್ರತಿಷ್ಠಿತ ಅಂತರಾಜ್ಯ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಹಾಗೂ ಹನುಮಗಿರಿಯಲ್ಲಿ ಅಮರಗಿರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು  ಇಂದು (ಫೆ. 11) ಪುತ್ತೂರಿಗೆ ಕೇಂದ್ರ ಗೃಹ ಸಚಿವ, ದೇಶದ ಪ್ರಥಮ ಸಹಕಾರ ಸಚಿವ ಅಮಿತ್‍ ಶಾ ಭೇಟಿ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್‍ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‍ ನಿಯೋಜನೆ ಮಾಡಲಾಗಿದೆ.

ಅಮಿತ್‍ ಶಾ ಸಹಿತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ರಾಜ್ಯದ ಹಲವು ಸಚಿವರು, ಜನಪ್ರತಿನಿಧಿಗಳು, ರಾಜಕೀಯ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ.

ನಗರದ ಸಹಿತ ಹೊರವಲಯದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ. ಕೇರಳ ಗಡಿ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು ನಿಗಾ ವಹಿಸಲಾಗುತ್ತಿದೆ. ಅಮಿತ್‍ಶಾ ಅವರು ಪಾಲ್ಗೊಳ್ಳುವ ಹನುಮಗಿರಿ, ತೆಂಕಿಲ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.































 
 

ಉನ್ನತ ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ಅಮಿತ್‍ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ಹಿನ್ನಲೆಯಲ್ಲಿ ಸುಮಾರು ಮೂರು ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು,  ಕಟ್ಟೆಚ್ಚರ ವಹಿಸಲಾಗಿದೆ. ಈ ಮಧ್ಯೆ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಈ ಭಾಗದಲ್ಲಿ ಸಕ್ರಿಯರಾಗಿದ್ದಾರೆ.

ಪೊಲೀಸ್‍ ನಿಯೋಜನೆ:

ಬಿಗಿ ಭದ್ರತಾ ಹಿನ್ನಲೆಯಲ್ಲಿ 1600 ಪೊಲೀಸ್‍ ಸಿಬ್ಬಂದಿಗಳ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 7 ಮಂದಿ ಎಸ್‍ಪಿ, 22 ಮಂದಿ ಡಿವೈಎಸ್‍ಪಿ, 38 ಮಂದಿ ಇನ್‍ಸ್ಪೆಕ್ಟರ್‍, 80 ಕ್ಕೂ ಅಧಿಕ ಪಿಎಸ್‍ಐಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜತೆಗೆ ಪ್ಯಾರಾ ಮಿಲಿಟರಿ ಪೋರ್ಸ್, ಅಮಿತ್‍ ಶಾ ಅವರಿಗೆ ಎಸ್‍ಪಿಜಿ ಭದ್ರತೆ ಇರಲಿದೆ. ಹನುಮಗಿರಿ, ಮೊಟ್ಟೆತ್ತಡ್ಕ ಹೆಲಿಪ್ಯಾಡ್‍, ತೆಂಕಲಿ ಸಮಾವೇಶ ಸ್ಥಳದಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

ಊಟದ ವ್ಯವಸ್ಥೆ

ಸುಳ್ಯ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕಾವು ಕ್ಯಾಂಪ್ಕೋ ಸಂಸ್ಥೆಯ ಬಳಿ, ಬೆಳ್ಳಾರೆ ಭಾಗದಿಂದ ಬರುವವರಿಗೆ ಪರ್ಪುಂಜ ಶಿವಕೃಪಾ, ಸವಣೂರು, ಸುಬ್ರಹ್ಮಣ್ಯ ಭಾಗದಿಂದ ಬರುವವರಿಗೆ ಮುಕ್ವೆ ಉಮಾಮಹೇಶ್ವರ ದೇವಸ್ಥಾನದ ಬಳಿ, ಬೆಳ್ತಂಗಡಿ ಹಾಗೂ ನೆಲ್ಯಾಡಿ ಭಾಗದಿಂದ ಬರುವವರಿಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಬಂಟ್ವಾಳ ಭಾಗದಿಂದ ಬರುವವರಿಗೆ ಮಾಣಿ – ಕಬಕ ರಸ್ತೆಯ ಮಿತ್ತೂರು ಪೆಟ್ರೋಲ್‍ ಪಂಪ್‍ ಬಳಿ, ವಿಟ್ಲ – ಕನ್ಯಾನ ಭಾಗದಿಂದ ಆಗಮಿಸುವವರಿಗೆ ಕಬಕ ವಿಟ್ಲ ರಸ್ತೆಯ ಅಳಕೆಮಜಲು ಭಜನಾ ಮಂದಿರ ಬಳಿ, ಪಾಣಾಜೆ ಭಾಗದಿಂದ ಬರುವವರಿಗೆ ಉಪ್ಪಳಿಗೆ ಶಾಲಾ ವಠಾರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಪಾರ್ಕಿಂಗ್‍ ಸ್ಥಳ ಹಾಗೂ ಪಾರ್ಕಿಂಗ್‍ ಪ್ರಮುಖರು

ವಿವೇಕಾನಂದ ತೆಂಕಿಲ ವಿದ್ಯಾಸಂಸ್ಥೆಯಲ್ಲಿ ನಡೆಯುವ ಕ್ಯಾಂಪ್ಕೋ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್‍ ಶಾ ಆಗಮಿಸುವ ಹಿನ್ನಲೆಯಲ್ಲಿ ವಾಹನಗಳನ್ನು ನಿಯೋಜನೆ ಮಾಡಿದ ಸ್ವಯಂ ಸೇವಕರು ಸೂಚಿಸಿದ ಸ್ಥಳದಲ್ಲೇ ಪಾರ್ಕ್ ಮಾಡತಕ್ಕದ್ದು ಎಂದು ಪಾರ್ಕಿಂಗ್‍ ವ್ಯವಸ್ಥೆ ಸಂಚಾಲಕರಾದ ಭಾಮಿ ಅಶೋಕ್‍ ಶೆಣೈ ಹಾಗೂ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.

ಪ್ರಮುಖವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ಗದ್ದೆ, ಪುತ್ತೂರು ನಗರದ ಕಿಲ್ಲೆ ಮೈದಾನ, ಎಪಿಎಂಸಿ, ವಿಐಪಿಗಳಿಗೆ ತೆಂಕಿಲ ಬೈಪಾಸ್‍ ವ್ಯಾಪ್ತಿಯ 3-4 ಲೇ ಔಟ್‍ಗಳಲ್ಲಿ ಪಾರ್ಕಿಂಗ್‍ ವ್ಯವಸ್ಥೆ ಇದೆ.

ಸುಳ್ಯದಿಂದ ಬರುವ ಬಸ್‍ಗಳಿಗೆ ಸುಭದ್ರದ ಬಳಿ (ಸಿಂಧೂ) ಪಾರ್ಕಿಂಗ್‍ಗೆ ಅಜಿತ್‍ ಕೆಯ್ಯೂರು (ಮೊ :8970994039), ಕಾಣಿಯೂರಿನಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಫಿಲೋಮಿನಾ ಹೈಸ್ಕೂಲ್‍ ಬಳಿ (ನರ್ಮದಾ) ದಿನೇಶ್‍ ತಿಂಗಳಾಡಿ (8431839614), ಸುಳ್ಯ ಕಡೆಯಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಬೈಪಾಸ್‍ ಅಭಯ ಮಾರ್ಬಲ್‍ ಎದುರು (ಯಮುನಾ) ಅನಿಲ್‍ ದರ್ಬೆ (9902813711), ವಿಐಪಿ ವಾಹನಗಳಿಗೆ ತೆಂಕಿಲ ಬೈಪಾಸ್‍ ಸುರೇಶ್‍ ಟವರ್‍ ಬಳಿ (ತುಂಗಾ, ಭದ್ರ) ಚಂದ್ರ ತೆಂಕಿಲ (9591197706), ತೆಂಕಿಲ ಗೌಡ ಸಮುದಾಯ ಭವನದ ಬಳಿ (ಶರಾವತಿ) ರೂಪೇಶ್‍ ಮುರ (7019504836), ಸರಕಾರಿ ವಾಹನಗಳಿಗೆ ತೆಂಕಿಲ ಸ್ವಾಮಿ ಕಲಾಮಂದಿರದ (ಕೃಷ್ಣಾ) ನಿತೇಶ್‍ ನಗರ (8904221429), ತೆಂಕಿಲ ಮಂಗಳಾ ಹಾರ್ಡ್‍ವೇರ್‍ ಕಟ್ಟಡದ ಬಳಿ (ಫಲ್ಗುಣಿ) ನಿತೇಶ್‍ ನಗರ  ಮತ್ತು ಬಲ್ನಾಡಿನಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ತೆಂಕಿಲ ದರ್ಶನ್‍ ಹಾಲ್‍ ಹಿಂಭಾಗ (ಶಾಂಭವಿ) ಚೇತನ್‍ ಬೊಳುವಾರು (8105895210), ಅದೇ ಭಾಗದಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಜೈನಭವನ (ಸರಯೂ) ಜೀವನ್‍ ಬಲ್ನಾಡು (9483215377), ಅದೇ ಭಾಗದಿಂದ ಬರುವ ದ್ವೀಚಕ್ರ ವಾಹನಗಳಿಗೆ ತೆಂಕಿಲ ಪಾದೆ (ನೇತ್ರಾವತಿ) ಭವಿಷ್ಯತ್‍ (7026869493), ವಿಟ್ಲ ಭಾಗದಿಂದ ಬರುವ ಬಸ್‍ಗಳಿಗೆ ಬೈಪಾಸ್‍ ರಸ್ತೆಯ ಆತ್ಮೀ ಕಂಫರ್ಟ್ ಬಳಿ (ಕಾವೇರಿ) ಪ್ರವೀಣ್‍ ಕಲ್ಲೇಗ (9663885236), ವಿಟ್ಲ ಭಾಗದಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಸುಶ್ರುತ ಆಸ್ಪತ್ರೆ ಬಳಿ (ಗೋದಾವರಿ) ರೂಪೇಶ್‍ ಬಲ್ನಾಡು (9632346192), ಬೆಳ್ತಂಗಡಿ, ಉಪ್ಪಿನಂಗಡಿಯಿಂದ ಬರುವ ಬಸ್‍ಗಳಿಗೆ ಮಹಾಲಿಂಗೇಶ್ವರ ದೇವಸ್ಥಾನದ (ಗೋದಾವರಿ) ಜೀತೇಶ್‍ (9606779737), ಸುಳ್ಯ ರಸ್ತೆಯಿಂದ ಬರುವ ನಾಲ್ಕು ಚಕ್ರದ ವಾಹನಗಳಿಗೆ ಬೈಪಾಸ್‍ ಭಾರತ್ ಗ್ಯಾಸ್‍ ಎದುರುಗಡೆ (ಕುಮಾರಧಾರ) ಹರೀಶ್‍ (8310857491), ಪಂಚವಟಿ ಬಳಿ (ಸೀತಾ), ಪರ್ಲಡ್ಕ ಶಾಲಾ ಮೈದಾನದಲ್ಲಿ (ಭಾಗೀರಥಿ) ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಾಹನಗಳು ಮಧ್ಯಾಹ್ನ 1.30 ರ ಒಳಗೆ ಸೂಚಿಸಿದ ಸ್ಥಳದಲ್ಲಿ ನಿಲುಗಡೆಗೊಳಿಸಬೇಕೆಂದು ಪಾರ್ಕಿಂಗ್‍ ವಿಭಾಗ ಸಂಚಾಲಕರು ಸೂಚಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top