ಪುತ್ತೂರು : ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಇಂದು ತನ್ನ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು, ರೈತಾಪಿ ವರ್ಗಕ್ಕೆ ಯಾತ್ರಿಕತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕ್ಯಾಂಪ್ಕೋ ಸಂಸ್ಥೆ ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಬೃಹತ್ ಕೃಷಿ ಯಂತ್ರ ಮೇಳವನ್ನು ಆಯೋಜನೆ ಮಾಡಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಅವರು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕೇರಳ, ಕರ್ನಾಟಕ ರಾಜ್ಯದ ರೈತಾಪಿ ವರ್ಗ ಯಂತ್ರ ಬಳಕೆ ಮಾಡುವ ಮೂಲಕ ಕೃಷಿ ಕಾರ್ಯವನ್ನು ಹೇಗ ಮಾಡಬೇಕು, ಯಾಂತ್ರಿಕತೆಯ ಬಳಕೆ ಹೇಗೆ ಎಂಬುದು ಈ ಕೃಷಿಯಂತ್ರ ಮೇಳದಲ್ಲಿ ಮಾಹಿತಿಗಳನ್ನು ನೀಡುವ ಕೆಲಸ ಕಾರ್ಯಗಳನ್ನು ಮಾಡಲಾಗುತ್ತದೆ. ಯಾಂತ್ರಿಕತೆಯ ಬಳಕೆಯೊಂದಿಗೆ ಕೃಷಿ ಕಾರ್ಯಗಳಲ್ಲಿ ಯುವಕ-ಯುವತಿಯರು ತಡೊಗಿಸಿಕೊಳ್ಳುವಂತೆ ಕೃಷಿಯಂತ್ರ ಮೇಳ ಪ್ರೇರಣೆ ನೀಡುವಂತಾಗುತ್ತದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕೊಡ್ಗಿ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಆದ್ದರಿಂದ ಶುಕ್ರವಾರ ನಡೆಯುವ ಉದ್ಘಾಟನಾ ಸಮಾರಂಭ ಸಹಿತ ಮೂರು ದಿನಗಳ ಕಾಲ ನಡೆಯುವ ಕೃಷಿಯಂತ್ರ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು, ಸಾರ್ವಜನಿಕರು ಪಾಲ್ಗೊಳ್ಳುವಂತೆ ಅವರು ವಿನಂತಿಸಿದ್ದಾರೆ.