ಪುತ್ತೂರು : ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಬೃಹತ್ ಕೃಷಿಯಂತ್ರ ಮೇಳ-೨೦೨೩ ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಬೃಹತ್ ಕೃಷಿಯಂತ್ರ ಮೇಳ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದ್ದು, ರೈತಾಪಿ ವರ್ಗದಲ್ಲಿ ಹುಮ್ಮಸ್ಸು ಹುಟ್ಟಿಸಿದೆ. ಈ ಮಳಿಗೆಯಲ್ಲಿ ಏನಿದೆ, ಏನಿಲ್ಲ ಕೃಷಿ ಚಟುವಟಿಕೆಗೆ ಸಹಕಾರಿಯಾಗುವ ಎಲ್ಲವೂ ಇದೆ. ಈ ನಿಟ್ಟಿನಲ್ಲಿ ವೀಕ್ಷಕದ ದಂಡೇ ಆಗಮಿಸುತ್ತಿದೆ.
ಕೃಷಿತಂತ್ರ ಮಳಿಗೆಗಳಲ್ಲಿ ಡ್ರೋನ್ ತಂತ್ರಜ್ಞಾನ ಬಳಸಿ ಔಷ ಸಿಂಪಡಣೆ , ಪ್ರಾತ್ಯಕ್ಷಿಕೆ, ಅಡಕೆ ಕೊಯ್ಲು ದೋಟಿಗಳು, ಔಷಧ ಸಿಂಪಡಣೆಗೆ ಕಾರ್ಬನ್ ಫೈಬರ್ ದೋಟಿಯ ಪ್ರಾತ್ಯಕ್ಷಿಕೆ ಹಾಗೂ ಮಾರಾಟ, ಬ್ಯಾಟರಿ ಚಾಲಿತ ಕೃಷಿ ಯಂತ್ರೋಪಕರಣ, ಸಾವಯವ ಗೊಬ್ಬರ್ ಬಳಕೆ ವಿಧಾನ ಕುರಿತು ಮಾಹಿತಿ, ಮಾರಾಟ ಎಲ್ಲವೂ ಆಕರ್ಷಿತಗೊಂಡವು.
ಮಂಗಳೂರು ವಿವಿ ಪ್ರವರ್ತಿತ ಪಾರಂಪರಿಕ ಗ್ರಾಮ : ತುಳುನಾಡಿನ ಜನರು ಅನಾದಿ ಕಾಲದಿಂದ ಮಾಡಿಕೊಂಡು ಬಂದಿರುವ ಕುಲಕಸುಬು ವೈಭವವನ್ನು ಮತ್ತೊಮ್ಮೆ ಸಾರುವ ಪಾರಂಪರಿಕ ಗ್ರಾಮ ಮಳಿಗೆಯಲ್ಲಿ ಬೆತ್ತದಿಂದ ಬುಟ್ಟಿ, ತೆಂಗಿನ ಗರಿಯಿಂದ ಮಡಲು, ಹೆಣೆಯುವುದು, ಕುಂಬಾರಿಕೆಯ ಮಣ್ಣಿನ ಮಡಕೆಗಳು, ಕತ್ತಿ, ಮಚ್ಚು, ಹಾರೆ, ಪಿಕ್ಕಾಸುಗಳ ಹಿಡಿಕೆ ತಯಾರಿಕೆ ಮುಂತಾದ ಹತ್ತು ಹಲವು ಕುಲಕಸುಬುಗಳು ವಿಶೇಷ ಆಕರ್ಷಣೆಯಾಗಿತ್ತು.
ಕನಸಿನ ಮನೆ ಮಳಿಗೆಯಲ್ಲಿ ಮಿತ ವೆಚ್ಚದ ಮನೆಯ ಮಾದರಿಗಳು, ಮನೆ ನಿರ್ಮಾಣಕ್ಕೆ ಬಳಸುವ ಸಿಮೆಂಟ್ ಕಾಂಕ್ರಿಟ್‌ನ ರೆಡಿಮೆಡ್ ಕಿಟಕಿ, ದಾರಂದ, ವಾಲ್‌ಗಳು, ಕುಳಿತುಕೊಳ್ಳುವ ಆಸನಗಳು,, ಮನೆಯ ಸಿಟ್‍ಔಟ್‍ಗಳಲ್ಲಿ ಬಳಸುವ ಆಕರ್ಷಕ ಕಂಬಗಳು, ಹತ್ತು ಹಲವಾರು ಮಾದರಿಗಳು ಕನಸಿಮನೆಯಲ್ಲಿ ಕಂಡು ಬಂದವು.
ಜನರನ್ನು ಕೆ‘ಬೀಸಿ ಕರೆದ ವಿವಿ‘ ಜಾತಿಯ ಹಣ್ಣು, ಹೂ, ಕ್ರೋಟನ್ ಗಿಡಗಳ ನರ್ಸರಿ ಮಳಿಗೆಗಳು : ಈ ಕೃಷಿ ಯಂತ್ರಮೇಳದಲ್ಲಿ ಹಾಕಲಾದ ವಿವಿ‘ ಜಾತಿಯ ಹೂ, ಹಣ್ಣು, ಕ್ರೋಟನ್, ಅಡಕೆ, ತೆಂಗು, ಬಾಳೆ, ಹಲಸು, ಅನಾನಸು, ಕೋಕೋ, ಶ್ರೀಗಂ‘, ಸಾಗುವಾಣಿ ಹೀಗೆ ಹಲವಾರು ಜಾತಿಯ ಹಸುರಿನಿಂದ ನಳನಳಿಸುತ್ತಿರುವ ಗಿಡಗಳು ನರ್ಸರಿಯಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿದ್ದು, ಎಲ್ಲರನ್ನೂ ಆಕರ್ಷಿಸುವಂತಿತ್ತು.
ಇನ್ನೊಂದೆಡೆ ವಸ್ತು ಪ್ರದರ್ಶನ ಮಳಿಗೆಯಲ್ಲಿ ಹಳೆಯ ಕಾಲದ ಭೂತಕಟ್ಟುವಿಕೆಯಲ್ಲಿ ವಿವಿಧ ದೈವಗಳ ಮೊಗಗಳು, ಮೂರ್ತಿಗಳು, ಆಯುಧ, ಹೀಗೆ ಹತ್ತು ಹಲವು ವಸ್ತುಗಳು ನೆರೆದಿದ್ದವರನ್ನು ಅಚ್ಚರಿಗೊಳಿಸಿತು.