ಫೆ.11 : ಅಮಿತ್ ಶಾ ಪುತ್ತೂರಿಗೆ ಆಗಮನ ಹಿನ್ನಲೆ : ಮಾರ್ಗ ಸೂಚಿ ಬಿಡುಗಡೆ

ಪುತ್ತೂರು : ಶನಿವಾರ ಪುತ್ತೂರಿಗೆ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಪುತ್ತೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಪುತ್ತೂರು ನಗರಕ್ಕೆ ಆಗಮಿಸುವ ವಾಹನಗಳಿಗೆ ಪರ್ಯಾಯ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಶನಿವಾರ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಮೈದಾನಕ್ಕೆ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಪುತ್ತೂರು ಹೊರತು ಪಡಿಸಿ ಹೊರವಲಯದಿಂದ ಬರುವ ಹಲವಾರು ವಾಹನಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಂದರ್ಭ ನಗರದಲ್ಲಿ ವಾಹನದಟ್ಟಣಿ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಸಂಚಾರ ರಸ್ತೆಗಳನ್ನು ಬದಲಿಸಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಲಿನೆಟ್ ವೃತ್ತದಿಂದ ಮುಕ್ರಂಪಾಡಿವರೆಗೆ ರಸ್ತೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30 ರ ತನಕ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನಿಷೇಧಿಸಲಾಗಿದೆ.



































 
 

ಸುಗಮ  ಸಂಚಾರದ ಹಿನ್ನಲೆಯಲ್ಲಿ ಮಂಗಳೂರು ಕಡೆಯಿಂದ ಸುಳ್ಯ ಮತ್ತು ಮಡಿಕೇರಿ ಕಡೆಗೆ ಹೋಗುವ ವಾಹನಗಳು ಲಿನೆಟ್ ವೃತ್ತ-ಬೊಳುವಾರು ವೃತ್ತ-ದರ್ಬೆ-ಪುರುಷರಕಟ್ಟೆ-ಪಂಜಳ-ಪರ್ಪುಂಜ ಮಾರ್ಗ ಬಳಸುವುದು.

ಮಡಿಕೇರಿ-ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪರ್ಪುಂಜ-ಪಂಜಳ-ಪುರುಷರಕಟ್ಟೆ-ದರ್ಬೆ-ಬೊಳುವಾರು ಮಾರ್ಗವಾಗಿ ಚಲಿಸುವುದು.

ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸುಗಳನ್ನು ನಿಲ್ಲಿಸಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಾಗೂ ಸುಳ್ಯ ಕಡೆಯಿಂದ ಬರುವ ಬಸ್ಸುಗಳನ್ನು ಮುಕ್ರಂಪಾಡಿಯ ಸಂತಚರ್ಚ್ ಮುಂಭಾಗ ಇರುವ ಖಾಲಿ ಮೈದಾನದಲ್ಲಿ ನಿಲ್ಲಿಸಲು ಹಾಗೂ ಕಾರುಗಳನ್ನು ನಗರದ ಕಿಲ್ಲೆ ಮೈದಾನ, ವಿಐಪಿ ವಾಹನಗಳನ್ನು ಗೌಡ ಸಮುದಾಯ ಭವನ ಮತ್ತು ಅದರ ಪಕ್ಕ ಇರುವ ಜಾಗದಲ್ಲಿ ಪಾರ್ಕಿಂಗ್ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top