ಇಂಗ್ಲಿಷ್‌ನಲ್ಲಿ ಬರಲಿದೆ ಕಾಂತಾರ

ಮಾರ್ಚ್‌ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌

ಬೆಂಗಳೂರು : ಇಡೀ ದೇಶ ಮೆಚ್ಚಿದ ಕಾಂತಾರ ಸಿನಿಮಾ ಈಗ ಇಂಗ್ಲಿಷ್‌ಗೆ ಡಬ್‌ ಆಗಿ ತೆರೆ ಕಾಣಲಿದೆ. ಕನ್ನಡ ಚಿತ್ರಗಳು ಇಂಗ್ಲಷ್‌ಗೆ ಡಬ್‌ ಆಗುವುದು ಅಪರೂಪ. ಇದೀಗ ಕಾಂತಾರ ಚಿತ್ರಕ್ಕೆ ಆ ಅವಕಾಶ ಒದಗಿ ಬಂದಿದೆ.

ಇದರಿಂದ ನಮ್ಮ‌ ಕನ್ನಡ ಸಿನಿಮಾ ಮತ್ತಷ್ಟು ಜನರಿಗೆ ತಲುಪಲಿದೆ. ಕಾಂತಾರ ಸಿನಿಮಾ ನೋಡಿದ ಉತ್ತರ ಭಾರತದ ಮಂದಿ ತುಳುನಾಡಿನ ಸಂಸ್ಕೃತಿ ಆಚರಣೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ ಇಂತಹ ಚಿತ್ರಗಳು ಮತ್ತಷ್ಟು ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಈ ಚಿತ್ರ ಹಾಲಿವುಡ್‌ ಮಂದಿಯನ್ನೂ ಗಮನ ಸೆಳೆಯುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ.































 
 

ಸಿನಿಮಾ ಮಾರ್ಚ್‌ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಇಂಗ್ಲೀಷ್‌ ಭಾಷೆಯಲ್ಲಿ ಸ್ಟ್ರೀಮ್‌ ಆಗಲಿದೆ. ಇದುವರೆಗೂ ಭಾರತೀಯ ಭಾಷೆಯಲ್ಲಿ ಸಿನಿಮಾ ನೋಡಿದವರು ಇಂಗ್ಲೀಷ್‌ನಲ್ಲಿ ಈ ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬುದನ್ನು ನೋಡಲು ಕಾಯುತ್ತಿದ್ದಾರೆ.

ಸೆಪ್ಟೆಂಬರ್‌ 30 ರಂದು ತೆರೆ ಕಂಡ ‘ಕಾಂತಾರ’ ಸಿನೆಮಾ ಜನವರಿ ಮೊದಲ ವಾರಕ್ಕೆ ಯಶಸ್ವಿ 100 ದಿನಗಳನ್ನು ಪೂರೈಸಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top