ಫೆ.11 ರಂದು ಪುತ್ತೂರಿನಲ್ಲಿ ಐತಿಹಾಸಿಕ ಸಮಾವೇಶ ; ರೈತರಿಗೆ ಇನ್ನಷ್ಟು ಚಟುವಟಿಕೆಗೆ ಶಕ್ತಿ, ಉತ್ತೇಜನ ನೀಡಲಿದೆ ಕಾರ್ಯಕ್ರಮ : ಸಚಿವ ಸುನಿಲ್ ಕುಮಾರ್

ಪುತ್ತೂರು : ಅಡಿಕೆ ಬೆಳೆಗಾರರು ಹಾಗೂ ರೈತರನ್ನು ಮುಂದಿಟ್ಟುಕೊಂಡು ಫೆ.11 ರಂದು ಪುತ್ತೂರಿನಲ್ಲಿ ಐತಿಹಾಸಿಕ ಸಮಾವೇಶವಾಗಿ ಮೂಡಿ ಬರಲಿದ್ದು, ರೈತರ ಇನ್ನಷ್ಟು ಕಾರ್ಯಚಟುವಟಿಕೆಗಳಿಗೆ ಶಕ್ತಿ ನೀಡುವ ಜತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಡೆಯಲಿದ್ದು, ಉದ್ಘಾಟನೆಗೋಸ್ಕರ ಮಧ್ಯಾಹ್ನ 12 ಗಂಟೆಗೆ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್‌ಶಾ ಆಗಮಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿಕ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ  ಸುನಿಲ್ ಕುಮಾರ್ ತಿಳಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಸಮಾವೇಶ ನಡೆಯುವ ತೆಂಕಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಮಧ್ಯಾಹ್ನ ಮೈದಾನವನ್ನು ಪರಿಶೀಲಿಸಿ ಬಳಿಕ ಮಾತನಾಡಿ,  ಬಹಳ ದೊಡ್ಡ ಪ್ರಮಾಣ ನಡೆಯುವ ಈ ಕ್ಯಾಂಪ್ಕೋ ಸವರ್ಣ ಮಹೋತ್ಸವವನ್ನು ಜನಪ್ರತಿನಿಧಿಗಳು ಹಾಗೂ ಕ್ಯಾಂಪ್ಕೋ ಜತೆಗೂಡಿ ಮಾಡಲಿದ್ದೇವೆ. ಮಂಗಳೂರಿನಲ್ಲಿರುವ ಎಲ್ಲಾ ರೈತರು ಮತ್ತು ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರನ್ನೂ ಈ ಸಮಾವೇಶಕ್ಕೆ ಸೇರಿಸಿಕೊಂಡು ಎರಡೂ ಕ್ಷೇತರಗಳಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಲು ಈ ಸಮಾವೇಶ ಕಾರಣವಾಗಲಿದೆ ಎಂದು ಅವರು ಹೇಳಿದರು.



































ಸಮಾವೇಶಲ್ಲಿ ಸುಮಾರು 75 ರಿಂದ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಅಡಿಕೆ ಬೆಳೆಗಾರರನ್ನು ಮತ್ತು ರೈತರನ್ನು ಕಣ್ಮುಂದೆ ಇಟ್ಟುಕೊಂಡು ನಡೆಯುವ ಸಮಾವೇಶ ಇದಾಗಲಿದೆ ಎಂದರು.

 
 

ಯಾವುದೇ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರಕಾರ ರೈತರ ಪರವಾಗಿ ಇದ್ದರೆ ಅದು ಬಿಜೆಪಿ ಸರಕಾರ. ಈ ಹಿನ್ನಲೆಯಲ್ಲಿ ಇದು ಅಮಿತಾಶಾ ಅವರ ಕಾಯ್ರಕ್ರಮವಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪ್ರಯೋಜನವಾಗಲಿದ್ದು, ಈ ನಿಟ್ಟಿನಲ್ಲಿ ಬೂತ್ ಮಟ್ಟದ ಕಾರ್ಯಕ್ರಮದ ಹಿನ್ನಲೆಯಲ್ಲ ದೊಡ್ಡ ಮಟ್ಟದಲ್ಲಿ ಸಕ್ರಿಯವಾಗಿ ಓಡಾಟ ಮಾಡುತ್ತಿದ್ದೆ. ದ.ಕ., ಉಡುಪಿ ಜಿಲ್ಲೆಯಲ್ಲಿ ರೈತಪರ ಚಟುವಟಿಕೆ ಮಾಡಲು ಸಂಕಲ್ಪ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, , ಸಾಜಾ ರಾಧಾಕೃಷ್ಣ ಆಳ್ವ,  ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top