ಪುತ್ತೂರು : ಮುಕ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕರ ವಿಶೇಷ ಅನುದಾನದಿಂದ ಒದಗಿಸಿದ ಸ್ಮಾರ್ಟ್ ಕ್ಲಾಸ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿದರು.
ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಕುಲಾಲ್ ಮಕ್ಕಾಳಿಗೆ ಸಮವಸ್ತ್ರ ವಿತರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಎಲರೂ ಶ್ರಮಿಸಿದಾಗ ನಮ್ಮ ಸರಕಾರಿ ಶಾಲೆ ಇನ್ನಷ್ಟು ಬೆಳೆಯುಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟಕ್ಕೆ ಆಯ್ಕೆಯಾದ ಆಯಿಷತ್ ಜಸೀನರನ್ನು ಶಾಸಕರು ಸನ್ಮಾನಿಸಿದರು. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಒಂದನೇ ತರಗತಿಯ ಶರಸ್ವಿಕಳ ಚಿಕಿತ್ಸೆಗೆ ಎಸ್‌ಡಿಎಮ್‌ಸಿ ಹಾಗೂ ಶಿಕ್ಷಕರ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು. ಸರ್ವೆ ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಸೇವಾನಿವೃತ್ತಿ ಹೊಂದಿದ ಅಲಿಶ್ ಆಪೋಷ್‌ರನ್ನು ಸನ್ಮಾನಿಸಲಾಯಿ
ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಅಬ್ದುಲ್್ ಸಮೀರ್, ಸಹ ಶಿಕ್ಷಕ ಚರಣ್ ಕುಮಾರ್,ಎಸ್‌ಡಿಎಂ ಸಿ ಸದಸ್ಯರು, ವಿದ್ಯಾಭಿಮಾನಿಗಳು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕಾರ್ಮೆಲ್ ಅಂದ್ರಾದೆ ಸ್ವಾಗತಿಸಿ, ದೈಹಿಕ ಶಿಕ್ಷಕಿ ವಿಮಲ, ಆಯಿಷತ್ ಜಸೀನ, ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿಜಯ ವಂದಿಸಿದರು. ಗ್ರಾಪಂ ಸದಸ್ಯರಾದ ಪುಷ್ಪ, ಕೇಶವ, ಗಣೇಶ್, ಜಯಲಕ್ಷ್ಮೀ ಉಪಸ್ಥಿತರಿದ್ದರು.