ವಿಟ್ಲ : ಅಕ್ರಮ ಸಕ್ರಮ ಮಂಜುರಾತಿ ಸಭೆ ಹಾಗೂ ಅಕ್ರಮ ಸಕ್ರಮ 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಮಂಗಳವಾರ ವಿಟ್ಲದಲ್ಲಿ ನಡೆಯಿತು.

ಪುತ್ತೂರು ಶಾಸಕ ಸಂಜೀವ ಮಠಂದೂರು ಹಕ್ಕುಪತ್ರ ವಿತರಣೆ ಮಾಡಿ, 12 ಗ್ರಾಮದ ಬಂಧುಗಳು ಇಂದು ನೀಡುವ ಹಕ್ಕುಪತ್ರದ ಮೂಲಕ ತಮ್ಮ ಭೂಮಿಯಲ್ಲಿ ಕೃಷಿ ಮಾಡಿ ತಾವೇ ಒಡೆಯನಾಗಿ ಇರಬೇಕು. ಈ ನಿಟ್ಟಿನಲ್ಲಿ ಅಕ್ರಮ-ಸಕ್ರಮ ಸಿಟ್ಟಿಂಗ್ ಮಾಡಿ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತೆನೆ ಎಂದರು.

ಕಾರ್ಯಕ್ರಮದಲ್ಲಿ,ಅಕ್ರಮ ಸಕ್ರಮ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ,, ಪರಮೇಶ್ವರಿ ಭಟ್., ಬಂಟ್ವಾಳ ತಾಲೂಕು ತಹಸೀಲ್ದಾರ್ ದಯಾನಂದ ಉಪಸ್ಥಿತರಿದ್ದರು ಉಪತಹಶೀಲ್ದಾರ್ ವಿಜಯವಿಕ್ರಮ್ ಸ್ವಾಗತಿಸಿರು. ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.