ಫೆ.18 : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.18 ಶನಿವಾರ ಮಾಘ ಮಾಸದ ಚತುರ್ದಶಿಯಂದು ಸಂಜೆ 6.30 ರಿಂದ ನಡೆಯಲಿದೆ.

ಅಂದು ಬೆಳಿಗ್ಗೆ 8 ರಿಂದ ಶ್ರೀ ದೇವರಿಗೆ ಮಹಾರುದ್ರಯಾಗ, 9 ರಿಂದ ಶತರುದ್ರಾಭಿಷೇಕ ಹಾಗೂ ಏಕ ಬಿಲ್ವಂ ಶಿವಾರ್ಪಣಂ ಸೇವೆ ನಡೆಯಲಿರುವುದು. ಮುಂಜಾನೆ 6.45 ರಿಂದ ಧ್ಯಾನ ಶಿವಮೂರ್ತಿ ಮುಂಭಾಗ ಭಜನೆ ಆರಂಭಗೊಂಡು ಮರುದಿನ ಬೆಳಗ್ಗಿನ ತನಕ ನಡೆಯಲಿರುವುದು.



































ಬೆಳಗ್ಗೆ 9 ಗಂಟೆಯಿಂದ ದೇವಾಲಯದ ಪಂಚಾಕ್ಷರಿ ಮಂಟಪದಲ್ಲಿ ಶಿವನ ಛದ್ಮವೇಷ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಟರಾಜ ವೇದಿಕೆಯಲ್ಲಿ ಮಧ್ಯಾಹ್ನ 3 ರಿಂದ ಸಂಗೀತೋತ್ಸವ, ಸಂಜೆ 5.30 ರಿಂದ ನೃತ್ಯೋತ್ಸವ, ರಾತ್ರಿ 8 ರ ನಂತರ ಹೊರಾಂಗಣದ ಕಂಡನಾಯಕನ ಕಟ್ಟೆಯಲ್ಲಿ  ಅಷ್ಠಾವಧಾನ ಸೇವೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‍ ಮುಳಿಯ, ಕಾರ್ಯನಿರ್ವಹಣಾಧಿಕಾರಿ ನವೀನ್‍ ಕುಮಾರ್‍ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top