ಪುತ್ತೂರು : ಕಾವು ಮಾಡನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವು ವಿವೇಕ ಶಾಲಾ ಯೋಜನೆಯಡಿ ನೂತನ ಕೊಠಡಿಗೆ ಶಂಕುಸ್ಥಾಪನೆ ಮತ್ತು ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಸೋಮವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ, ಸಂಸ್ಕಾರಯುತ ಶಿಕ್ಷಣಕೆ ಪೂರಕವಾಗಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಕುಡಿಯುವ ನೀರಿನ ಘಟಕ ಕೊಡುವ ಕೆಲಸ ಸರಕಾರ ಮಾಡಿದೆ. ಮಕ್ಕಳ ವಿದ್ಯಾಭ್ಯಾಸಕೆ ಪೂರಕವಾಗಿ ಸರಕಾರಿ ಶಾಲೆಗಳಿಗೆ ಹಲವು ಯೋಜನೆಗಳ ಮುಕಾಂತರ ಸ್ಮಾರ್ಟ್ ಕ್ಲಾಸ್ ಒದಗಿಸಿ ಮಕ್ಕಳ ಕಲಿಕೆಗೆ ಪೂರಕವಾಗಿ ಸರಕಾರಿ ಶಾಲೆಗಳನ್ನು ಬೆಳೆಸುವ ಕೆಲಸ ಸರಕಾರ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಮಣ್ಯ, ಸಂತೋಷ್ ಮಣಿಯಾಣಿ, ಪಂಚಾಯತ್ ಸದಸ್ಯರಾದ ಮೋನಪ್ಪ ಪೂಜಾರಿ, ಜಯಂತಿ, ಶಂಕರ್, ವಿಜಿತ್, ಲೋಕೇಶ್ ಚಾಕೋಟೆ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸವಿತಾ ಹಾಗೂ ಸದಸ್ಯರು, ಗುತ್ತಿಗೆದಾರರು ಶಿಕ್ಷಕವೃಂದ, ಶಾಲಾಭಿಮಾನಿಗಳು ಉಪಸ್ಥಿತರಿದ್ದರು.
ಮೋನಪ್ಪ ಪೂಜಾರಿ ಸ್ವಾಗತಿಸಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ರಾಜೇಶ್ ವಂದಿಸಿದರು.