ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ವಿದ್ಯಾರ್ಥಿ ಭವನ ಮತ್ತು ಕ್ಷೇಮಾಭಿವೃದ್ಧಿ ಸಂಘದ ಶತಮಾನೋತ್ಸವ

ಪುತ್ತೂರು : ವೇದ ಎಂಬುದು ಒಂದು ಕಾಲಕ್ಕೆ ಸೀಮಿತವಾಗಿರುವುದಲ್ಲ. ಯೋಗ್ಯತೆಗೆ ಅನುಗುಣವಾಗಿ ಗುಣಗಳನ್ನು ಮಾಡಲಾಗಿದೆ. ಇತಿಹಾಸವನ್ನು ಬರೆಯುವಾಗ ಸತ್ಯವನ್ನು ಮರೆಮಾಚಿಕೊಂಡು ಬರಲಾಗಿದೆ. ಜಪ, ಅನುಷ್ಠಾನಗಳನ್ನು ಬಿಟ್ಟು ಹೋಗುತ್ತಿರುವುದು ಅಪಾಯದ ಸೂಚನೆಯನ್ನು ನೀಡುತ್ತಿದೆ ಎಂದು ಶ್ರೀ ಕ್ಷೇತ್ರ ಕಟೀಲು ಹರಿನಾರಾಯಣ ಅಸ್ರಣ್ಣರು ಹೇಳಿದರು.































ಅವರು ಭಾನುವಾರ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ವಿದ್ಯಾರ್ಥಿ ಭವನ ಮತ್ತು ಕ್ಷೇಮಾಭಿವೃದ್ಧಿ ಸಂಘದ ಶತಮಾನೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಹಿಂದು ಧರ್ಮ ತಾಯಿಗೆ ಮಹತ್ವ ಸ್ಥಾನ ನೀಡಿದೆ. ಹಿಂದುಗಳನ್ನು ಬೇರೆಯವರು ಆಳಿದರೂ, ಹಿಂದುತ್ವ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರಲ್ಲಿ ಬ್ರಾಹ್ಮಣರು ಭಾಗವಹಿಸಿದ್ದು, ಅಧಿಕಾರಕ್ಕಾಗಿ ಮುಂದೆಹೋಗಿಲ್ಲ. ಬ್ರಾಹ್ಮಣರು ಯಾವ ಜಾತಿಯನ್ನು ತುಳಿಯುವ ಕಾರ್ಯ ಮಾಡಿಲ್ಲ, ಬ್ರಾಹ್ಮಣರನ್ನು ತುಳಿಯಬೇಕೆಂಬ ಕಾರಣಕ್ಕೆ ಅಪಪ್ರಚಾರಗಳನ್ನು ಮಾಡಿಕೊಂಡು ಬರಲಾಗಿದೆ. ಎಲ್ಲರಿಗೂ ಒಳ್ಳೆಯ ಮನಷ್ಸು ಬಂದಾಗ ಬ್ರಾಹ್ಮಣರಿಗೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.

 
 

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಆಧ್ಯಾತ್ಮಿಕತೆಗೆ ಬ್ರಾಹ್ಮಣರ ಕೊಡುಗೆ ಬಹಳ ದೊಡ್ಡದಿದ್ದು, ಈ ಮೂಲಕ ದೇಶ ಇಂದು ವಿಶ್ವಕ್ಕೆ ಜಗದ್ಗುರುವಾಗಿದೆ. ಪುತ್ತೂರಿನಲ್ಲಿ ಸಹಕಾರಿಗೆ ಮುನ್ನುಡಿಯನ್ನು ಬ್ರಾಹ್ಮಣ ಸಮಾಜ ಬರೆದಿದೆ. ಭೂಮಸೂದೆ ಬಂದ ಸಂದರ್ಭ ಹೆಚ್ಚು ಭೂಮಿಯನ್ನು ಕಳೆದುಕೊಂಡವರು ಬ್ರಾಹ್ಮಣರಾಗಿದ್ದು, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಆರ್ಥಿಕ ಸಹಾಯವನ್ನು ಈಗಿನ ಸರ್ಕಾರ ಮಾಡಿದೆ. ಗಾಯತ್ರಿ ಸ್ವಸಹಾಯ ಸಂಘದ ಮೂಲಕ ಬಡವರಿಗೆ 1ಲಕ್ಷ ಸಹಾಯ ನೀಡುವ ಕಾರ್ಯ ಮಾಡುತ್ತಿದೆ. ಸಮಾಜಕ್ಕೆ ಧರ್ಮ ಸಂದೇಶ ನೀಡುವ ಕಾರ್ಯ ಇಂತಹ ಭವನಗಳ ಮೂಲಕ ನಡೆಯಬೇಕು ಎಂದರು.

ಶತಮಾನೋತ್ಸವದ ಅಂಗವಾಗಿ ರವಿಚಂದ್ರ ನೆಲ್ಲಿತ್ತಾಯ ಅವರ ನೇತೃತ್ವದಲ್ಲಿ ಗಣಪತಿ ಹವನ ಸಹಿತ ಚಂಡಿಕಾಯಾಗ ನಡೆಯಿತು. ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳನ್ನು ಗುರುತಿಸಲಾಯಿತು. ಕಲೋತ್ಸದ ಹಿನ್ನಲೆ ರಾಷ್ಟ್ರ ಮಟ್ಟದ ಶಾಸ್ತ್ರೀಯ ಸಂಗೀತ ಸ ಭಾಗವಹಿಸಿ ತೇಜಸ್ ಚಿನ್ಮಯ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ವಿಧ್ಯಾರ್ಥಿ ಭವನದ ಹಳೆವಿದ್ಯಾರ್ಥಿ ರವೀಂದ್ರ ಉಪಾಧ್ಯ ಅಭಿಪ್ರಾಯ ತಿಳಿಸಿದರು.

ವಿಷ್ಣುಮೂರ್ತಿ ಪ್ರಾರ್ಥಿಸಿದರು. ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ. ವಿ. ನಾರಾಯಣ, ವಕೀಲ ರಾಮ್ ಮೋಹನ್ ರಾವ್, ನಗರ ಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ ಮತ್ತಿತರರರು ಉಪಸ್ಥಿತರಿದ್ದರು. ಕಾರ್ಯಕಾರಿ ಮಂಡಳಿ ಅಧ್ಯಕ್ಷ ಸತ್ಯನಾರಾಯಣ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಎಚ್. ಕೃಷ್ಣ ಪ್ರಸಾದ್ ರಾವ್ ವಂದಿಸಿದರು. ಸದಸ್ಯ ವಸಂತ ಭಟ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top