ಸವಣೂರು : ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಟ್ಟದ ‘ಭಾರತ ರಶ್ಮಿ’ ಕಾರ್ಯಕ್ರಮ ಶನಿವಾರ ನಡೆಯಿತು.
ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರಶ್ಮಿ ಯಾವತ್ತೂ ಹೊಸತನಗಳಿಗೆ ತೆರೆದುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಂಡಿದೆ. ಹಳ್ಳಿಯ ಮಕ್ಕಳಿಗೆ ಒಳಿತಾದರೆ ಅದುವೇ ನಮಗೆ ಸಂತೋಷ ಎಂದರು.
ಪ್ರಾಂಶುಪಾಲ ಸೀತಾರಾಮ ಕೇವಳ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಅತ್ಯಾಧುನಿಕ ಸೌಲಭ್ಯಗಳ ವಿವರ ನೀಡಿ, ಒಟ್ಟಾರೆಯಾಗಿ ಸಮಗ್ರ ಮತ್ತು ಸಶಕ್ತ ಭಾರತ ನಿರ್ಮಾಣಕ್ಕೆ ವಿದ್ಯಾರಶ್ಮಿ ಸಣ್ಣದೊಂದು ಕೊಡುಗೆ ನೀಡುತ್ತಿದೆ ಎಂದರು.
ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ, ನೈಮಿತ್ತಿಕ ಜೀವನದಲ್ಲಿ ಗಣಿತ ಮತ್ತು ವಿಜ್ಞಾನಗಳ ಮಹತ್ವವನ್ನು ತಿಳಿ ಹೇಳಿ ಅವುಗಳ ಕಲಿಕೆಗೆ ಆಸಕ್ತಿದಾಯಕ ಮತ್ತು ಸರಳ ಮಾರ್ಗಗಳನ್ನು ತಿಳಿಸಿಕೊಟ್ಟರು.
ವಿದ್ಯಾರಶ್ಮಿಯಲ್ಲಿ ವಿನೂತನವಾಗಿ ಆರಂಭವಾಗಿರುವ ಭಾರತರಶ್ಮಿ ಎಂಬ ಅನಿಮೇಟೆಡ್ ಲರ್ನಿಂಗ್ ಕರ‍್ಯಕ್ರಮವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭ ಎಂಬೈಬ್ ಕಂಪೆನಿಯ ಶೈಕ್ಷಣಿಕ ಸಲಹೆಗಾರ ಡಾ. ರಾಕಿ ಮತಾಯಿ ನೂತನ ಕಲಿಕಾ ವಿಧಾನದ ಪ್ರಯೋಜನವನ್ನು ತಿಳಿಸಿಕೊಟ್ಟರು. ಎಂಬೈಬ್ ಪರವಾಗಿ ಶಿಕ್ಷಕ ಮತ್ತು ವಿದ್ಯಾರಶ್ಮಿ ಸಾಧಕರನ್ನು ಗೌರವಿಸಲಾಯಿತು. ಐದು ಜನ ಅದೃಷ್ಟವಂತ ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಶ್ವಿನ್ ಎಲ್.ಶೆಟ್ಟಿ ಅವರು ಪ್ರಮಾಣ ಪತ್ರ ಮತ್ತು ನಗದು ಬಹುಮಾನಗಳನ್ನು ವಿತರಿಸಿದರು. ಎಂಬೈಬ್ ಕಂಪೆನಿಯ ಮಾರ್ಕೆಟಿಂಗ್ ಆಫೀಸರ್ ರಂಜನ್ ಶ್ರೀರಾಮ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ, ವಿದ್ಯಾರಶ್ಮಿ ವಿದ್ಯಾಲಯದ ಉಪಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆಯಿಷಾ ವಫಾ ಕರ‍್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಣವ್ ಕೆ.ಯು. ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಶಂತನುಕೃಷ್ಣ ವಂದಿಸಿದರು. ಜಸ್ಮಿತಾ ಸಂವಿಧಾನದ ಆಶಯ ವಾಚಿಸಿದರು.