ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ ವರ್ಗಾವಣೆ : ಪ್ರಭಾರ ತಹಶೀಲ್ದಾರ್ ಆಗಿ ರಮೇಶ್ ಬಾಬು

ಪುತ್ತೂರು : 2023 ರ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಸರ್ಗಪ್ರಿಯ ಜೆ. ಅವರನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಗೆ ವರ್ಗಾವಣೆ ಮಾಡಲಾಗಿದೆ.

ಈ ಹಿಂದೆ ಪುತ್ತೂರು ತಹಶೀಲ್ದಾರ್ ಆಗಿ ಪ್ರಸ್ತುತ ಕಡಬ ತಹಶೀಲ್ದಾರ್ ಆಗಿರುವ ರಮೇಶ್ ಬಾಬು ಅವರು ಪುತ್ತೂರು ಪ್ರಭಾರ ತಹಶೀಲ್ದಾರ್ ಆಗಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸಲಿದ್ದಾರೆ.

ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ ಅವರಿಗೆ ಜ.30 ರಂದೇ ವರ್ಗಾವಣೆ ಆದೇಶ ಬಂದಿತ್ತಾದರೂ ಆದೇಶದಲ್ಲಿ ಗ್ರೇಡ್-2 ಕೊಟ್ಟೂರು ತಾಲೂಕು ವಿಜಯನಗರ ಜಿಲ್ಲೆ ಎಂದು ನಮೂದಿಸಲಾಗಿತ್ತು. ಇದೀಗ ತಿದ್ದುಪಡಿಯಾಗಿ ಬಂದಿರುವ ಆದೇಶದಲ್ಲಿ ವರ್ಗಾವಣೆ ಊರು ಸ್ಪಷ್ಟಪಡಿಸಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top