ಪುತ್ತೂರು : ತಾಲೂಕಿನ ಇರ್ದೆಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಗೋಪಾಲ ಕ್ಷೇತ್ರ ಹಾಗೂ ಪೂಮಾಣಿ-ಕಿನ್ನಿಮಾಣಿ ಮತ್ತು ರಾಜನ್ ದೈವಗಳ ಕದಿಕೆ ಚಾವಡಿಯ ಅನ್ನಛತ್ರದ ಉದ್ಘಾಟನಾ ಕಾರ್ಯಕ್ರಮ ಫೆ.3 ಶುಕ್ರವಾರ ನಡೆಯಿತು.
ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಅನ್ನಛತ್ರವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ, ದೇವಸ್ಥಾನ ಅಭಿವೃದ್ಧಿಗೆ ಸರಕಾರ ಉತ್ತಮ ಕೆಲಸ ಮಾಡುತ್ತಿದ್ದು, ದೇವಸ್ಥಾನಗಳ ಅಭಿವೃದ್ಧಿಗೆ ಪೂರಕವಾಗುವಂತೆ ರಸ್ತೆ ಅಭಿವೃದ್ಧಿ, ಇಂಟರ್ ಲಾಕ್ ಅಳವಡಿಕೆ ಹೀಗೆ ಹತ್ತು ಹಲವು ಯೋಜನೆಗಳಿಗೆ ಸರಕಾರ ಅನುದಾನ ನೀಡಿದೆ. ಎಲ್ಲಾ ಪುಣ್ಯಕ್ಷೆತ್ರಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ,ಪವಿತ್ರ ಡಿ., ಸದಸ್ಯರಾದ ಪ್ರಕಾಶ್ ರೈ, ಜಗನ್ನಾಥ್, ಚಂದ್ರಶೇಖರ್, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಭಟ್, ದೇವಸ್ಥಾನದ ಸಮಿತಿಯ ಧನ್ಯರಾಜ್, ದೇವಪ್ಪ, ಗಣೇಶ್ ಭಟ್, ರಾಧಾಕೃಷ್ಣ ಆನಾಜೆ, ರಾಧಾಕೃಷ್ಣ ಬೈಲಾಡಿ, ವಿಠಲ್ ರೈ ಬಾಲ್ಯೊಟ್ಟು, ಪುಷ್ಪರಾಜ್ ರೈ, ಶೀನಪ್ಪ, ಕೇಶವ್ ಪಟ್ಟೆ, ಮುರಳಿ ಮತ್ತಿತರರು ಉಪಸ್ಥಿತರಿದ್ದರು.