ಸಂಚಲನ ಸೃಷ್ಟಿಸಿದ ಆರ್‌ಎಸ್‌ಎಸ್ ಮುಖಂಡನ ಹೇಳಿಕೆ
ಹೊಸದಿಲ್ಲಿ : ಗೋಮಾಂಸ ತಿಂದವರು ಕೂಡ ಹಿಂದು ಧರ್ಮಕ್ಕೆ ಘರ್ ವಾಪಸಿ ಆಗಬಹುದು ಎಂದಿರುವ ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಸಂಚಲನವುಂಟು ಮಾಡಿದೆ. ಗೋಮಾಂಸ ಸೇವಿಸಿದವರಿಗೆ ನಾವು ಬಾಗಿಲು ಮುಚ್ಚುವುದಿಲ್ಲ. ಅವರು ಘರ್ ವಾಪಸಿ ಆಗಬಹುದು ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಗೋಮಾಂಸ ಸೇವಿಸಿದವರು ಹಿಂದೂ ಧರ್ಮಕ್ಕೆ ಮರಳಬಹುದು. ಅವರ ಪೂರ್ವಜರು ಹಿಂದೂಗಳಾಗಿದ್ದವರು, ಇಂದಿಗೂ ಹಿಂದೂಗಳಾಗಿದ್ದಾರೆ ಎಂದು ಹೇಳಿದರು. ಇಷ್ಟೇ ಅಲ್ಲ, ತನ್ನನ್ನು ತಾನು ಹಿಂದೂ ಎಂದು ಪರಿಗಣಿಸುವವನು ಹಿಂದೂ. ಇಷ್ಟೇ ಅಲ್ಲ ನಾವು ಯಾರನ್ನು ಹಿಂದೂ ಎಂದು ಕರೆಯುತ್ತೇವೆಯೋ ಅವರೂ ಹಿಂದೂಗಳೇ ಎಂದಿದ್ದಾರೆ.
ಭಾರತದಲ್ಲಿ ಆರುನೂರಕ್ಕೂ ಹೆಚ್ಚು ಬುಡಕಟ್ಟುಗಳಿವೆ. ಭಾರತ ವಿರೋಧಿ ಶಕ್ತಿಗಳು ಅವರನ್ನು ಹಿಂದೂ ಎಂದು ಪರಿಗಣಿಸುವುದಿಲ್ಲ. ಆದರೆ ಆತ ಹಿಂದೂ. ಬಲವಂತದಿಂದ ದನದ ಮಾಂಸ ಸೇವಿಸಿದರೂ, ಕಾರಣಾಂತರಗಳಿಂದ ದೂರ ಹೋದರೆ ಅವರಿಗೆ ಬಾಗಿಲು ಮುಚ್ಚುವಂತಿಲ್ಲ. ಅವರೂ ಘರ್ ವಾಪಸಿ ಮಾಡಬಹುದು ಎಂದರು.
ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಲು ಭಾರತ ಒಂದಾಗಲಿದೆ. ಭಾರತದಲ್ಲಿ ವಾಸಿಸುವ ಜನರು ಹಿಂದೂಗಳು ಏಕೆಂದರೆ ಅವರ ಪೂರ್ವಜರು ಹಿಂದೂಗಳು. ಭಾರತದ ಜನರ ಆರಾಧನಾ ವಿಧಾನ ವಿಭಿನ್ನವಾಗಿರಬಹುದು. ಆದರೆ ಅವರೆಲ್ಲರ ಡಿಎನ್ಎ ಒಂದೇ. ಒತ್ತಾಯಪೂರ್ವಕವಾಗಿ ಗೋಮಾಂಸ ಭಕ್ಷಿಸಿದವರನ್ನು ಕೂಡ ಹಿಂದೂ ಧರ್ಮಕ್ಕೆ ಮರಳಿ ತರಬಹುದು. ಅವರು ಬರಲು ಬಯಸಿದರೆ, ಅವರಿಗೆ ಬಾಗಿಲು ಮುಚ್ಚುವುದಿಲ್ಲ. ಹಿಂದೂ ಎಂಬುದು ಒಂದು ಗುರುತು ಮತ್ತು ಜನರು ಪರಸ್ಪರ ಸಂಪರ್ಕ ಹೊಂದಿರುವ ಸಂಸ್ಕೃತಿಯಾಗಿದೆ ಎಂದು ಹೇಳಿದ್ದಾರೆ.