ಪುತ್ತೂರು : ಫೆ.11 ರಂದು ಸಹಕಾರಿ ಸಚಿವ ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ವಿವಿಧ ಕಡೆಗಳಿಂದ ಆಗಮಿಸುವ ಬಸ್ ಮುಂತಾದ ವಾಹನಗಳ ಪಾರ್ಕಿಂಗ್ ವ್ಯವಸ್ತೆಯನ್ನು ಮಿತ್ತೂರಿನಲ್ಲಿ ಮಾಡಲಾಗಿದ್ದು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಶುಕ್ರವಾರ ಪರಿಶೀಲಿಸಲಾಯಿತು
ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಜತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷ ಚಣಿಲ ತಿಮಪ್ಪ ಶೆಟ್ಟಿ, ಮಂಡಲ ಅಧ್ಯಕ್ಷ ಸಜಾ ರಾಧಾಕೃಷ್ಣ ಆಳ್ವ,ಇಡ್ಕಿದು ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕೋಲ್ಪೆ ದೇವಸ್ಥಾನ ಮುಕ್ತೇಶ್ವರ ಕೆ ಎಸ್ ಸುರೇಶ್ ಭಟ್ ಮುಕೂಡ, ಪ್ರಪುಲ ಚಂದ್ರ ಸೂರ್ಯ, ಗೋಪಾಲ ಕೃಷ್ಣ ಭಟ್ ಬೈಪಾದವು ಮಿತ್ತೂರು ಉಪಸ್ಥಿತರಿದ್ದರು.