ವಿಟ್ಲ : ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸಂಜೀವ ಮಠಂದೂರು ಅವರಿಗೆ ಟಿಕೇಟ್ ನೀಡಿದರೆ ಸೋಲುವುದು ಗ್ಯಾರಂಟಿ ?
ಹೀಗೊಂದು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರೇ ಈ ರೀತಿ ಹೇಳಿಕೆ ನೀಡಿರುವುದು ಸ್ಪಷ್ಟ ಕಂಡು ಬರುತ್ತಿದೆ
ಈ ರೀತಿ ಏಕವಚನದಲ್ಲಿ ಶಾಸಕರ ನ್ನು ತೇಜೊವಧೆ ಮಾಡಿ ಮಾತನಾಡಿರುವ ವ್ಯಕ್ತಿ ವಿಟ್ಲದ ಶ್ರೀ ಕೃಷ್ಣ ವಿಟ್ಲ ಎಂಬ ಬರಹದಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಚಾರವಾಗಿ ಶ್ರೀ ಕೃಷ್ಣ ವಿಟ್ಲ ಅವರನ್ನು ಸಂಪರ್ಕಿಸಿದಾಗ, ಈ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ, ಆಡಿಯೋವನ್ನು ವೈರಲ್ ಮಾಡಿದವರಲ್ಲೇ ಕೇಳಿ ಎಂದು ಸಾರಾಸಗಟಾಗಿ ಅಲ್ಲಗಳೆಯುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ವೈರಲ್ ಆಗುತ್ತಿರುವ ಈ ಅಡಿಯೋ ಫೇಕ್ ಆಗಿರಬಹುದು ಎಂದು ಕಂಡು ಬರುತ್ತಿದೆ.