ಚಿಕಿತ್ಸಾ ವೆಚ್ಚ, ಆಶಕ್ತರಿಗೆ ಆಹಾರ ಕಿಟ್ ವಿತರಣೆ
ಪುತ್ತೂರು : ಇಲ್ಲಿಯ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ನ ಆಶ್ರಯದಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಪುತ್ತೂರು ಜೆಸಿಐ ಹಾಗೂ ಪುತ್ತೂರು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಊರ ಪರವೂರ ದಾನಿಗಳ ಸಹಕಾರದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 20ನೇ “ಒಳಿತು ಮಾಡು ಮನುಷ್ಯ ಕಾರ್ಯಕ್ರಮ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಪುತ್ತೂರು ಜೆಸಿಐ ಅಧ್ಯಕ್ಷ, ಸುಹಾಸ್ ಮರಿಕೆ ಮಾತನಾಡಿ, ಸೇವೆ ಜೀವನದ ಶ್ರೇಷ್ಠ ಕೆಲಸ. ನಾವು ಸಮಾಜಕ್ಕೆ ಒತ್ತು ಕೊಡುವುದರ ಜತೆಗೆ ನಿಸ್ವಾರ್ಥ ಸೇವೆ ಮಾಡಿದಾಗ ಅದು ಸಮಾಜ ಸೇವೆಯಾಗುತ್ತದೆ. ಸೇವೆಯು ಜೀವನದ ಪರಮ ಧ್ಯೇಯ ಆಗಬೇಕು ಎಂದು ಹೇಳಿದರು.ಇನೋರ್ವ ಮುಖ್ಯ ಅತಿಥಿಯಾಗಿ ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯ್ಕ್ ಮಾತನಾಡಿ,ಈ ಸಂಸ್ಥೆಯು ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ 60,000 ಸಾವಿರ ಮೊತ್ತದ 60 ಆಹಾರ ಸಾಮಗ್ರಿಗಳ ಕಿಟ್ ವಿತರಣೆ,
ಪ್ರತಿಭಾವಂತ ಹಗ್ಗಜಗ್ಗಾಟ ಆಟಗಾರದ ಕರಾಯ ಗ್ರಾಮದ ಹರೀಶ್ ನಾಯ್ಕ್ ಅವರ ಕಣ್ಣಿನ ಚಿಕಿತ್ಸೆಗೆ 44 ನೇ ಯೋಜನೆಯಾಗಿ ರೂ.10,000 ಮೊತ್ತದ ಚೆಕ್ ವಿತರಣೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡಗನ್ನೂರಿನ ಕು. ಅನನ್ಯ ಅವರಿಗೆ ಒಂದು ತಿಂಗಳಿಗೆ ಬೇಕಾಗಿರುವ 2750 ರೂಪಾಯಿಯ ಔಷಧಿ ವಿತರಣೆ. ಮಂಗಳೂರು ವಾಮಂಜೂರಿನ ಮಮತಾ ಅವರು ಕಿಡ್ನಿ ಸಮಸ್ಯೆಯಿಂದ ತೀರಿಹೋಗಿದ್ದು. ಅವರ ಕುಟುಂಬಕ್ಕೆ ರೂ. 2500 ಸಾಂತ್ವನ ನಿಧಿಯ ಚೆಕ್ ವಿತರಣೆ, ದಾನಿಗಳು ನೀಡಿದ ವಸ್ತ್ರವನ್ನು ಅವಶ್ಯಕತೆ ಇರುವವರಿಗೆ ನೀಡಲಾಯಿತು. 80 ಜನರಿಗೆ ಬಿಪಿ, ಶುಗರ್ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐಯ ದಾಮೋದರ ಪಾಟಲಿ, ಮನೋಹರ್, ಲಯನ್ಸ್ ನ ಕ್ಲಬ್ನ ನ ಗಣೇಶ್ ಶೆಟ್ಟಿ, ಶಿವ ಪ್ರಸಾದ್ ಹಾಗೂ ಟ್ರಸ್ಟ್ ಪದಾಧಿಕಾರಿ, ಕಲಾವಿದ ಕೃಷ್ಣಪ್ಪ ಶಿವನಗರ ಪ್ರಧಾನ ಕಾರ್ಯದರ್ಶಿ JC ಮೋಹನ್ ಸಿಂಹವನ, ಸ್ಥಾಪಕ ಅಧ್ಯಕ್ಷ JC ಚೇತನ್ ಕುಮಾರ್ ಪುತ್ತೂರು, ಅಧ್ಯಕ್ಷೆ ಶೋಭಾ ಮಡಿವಾಳ, ಮಾಲಿನಿ, ಅಕ್ಷಯ ಕುಲಾಲ್, ಪುಷ್ಪ ಭಂಡಾರಿ, ವಸಂತಿ, ಸರಸ್ವತಿ, ವಿಜಯ್ ಕುಮಾರ್ ಹಾಜರಿದ್ದರು. ಕುಮಾರಿ ಯಕ್ಷಿತಾ ಪ್ರಾರ್ಥಿಸಿದರು. ಶ್ರುತಿ ಸ್ವಾಗತಿಸಿದರು. ಶ್ರುತಿ ಕೆ. ವಂದಿಸಿದರು. ಕುಮಾರಿ ಹರ್ಷಿತಾ ಹಾಗೂ ಯೋಜನಾಧಿಕಾರಿ ಕುಮಾರಿ ಸೌಜನ್ಯ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು.