ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ : 14 ಸಾವು

ಮೃತರಲ್ಲಿ 10 ಮಹಿಳೆಯರು 3 ಮಕ್ಕಳು

ರಾಂಚಿ: ಜಾರ್ಖಂಡ್‌ನ ಧನ್‌ಬಾದ್ ನಗರದಲ್ಲಿ ಬಹುಮಹಡಿ ಕಟ್ಟಡವೊಂದಕ್ಕೆ ಬೆಂಕಿಹತ್ತಿಕೊಂಡು ಕನಿಷ್ಠ 14 ಮಂದಿ ಬೆಂಕಿಗೆ ಸಾವಿಗೀಡಾಗಿದ್ದಾರೆ.
ಆಶೀರ್ವಾದ್ ಟವರ್ ಜೋರಫಟಕ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 40 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಧನ್‌ಬಾದ್‌ನ ಜೋರಾಫಾಟಕ್‌ ಎಂಬಲ್ಲಿರುವ ಆಶೀರ್ವಾದ್‌ ಟವರ್ಸ್‌ ಎಂಬ ಬಹುಮಹಡಿ ವಸತಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ನಿನ್ನೆ ರಾತ್ರಿ ಬೆಂಕಿದುರಂತ ಸಂಭವಿಸಿ 14 ಮಂದಿ ಸಾವನ್ನಪ್ಪಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ 10 ಮಹಿಳೆಯರು ಮತ್ತು ಮೂವರು ಮಕ್ಕಳು ಇದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top