ಕಾಣಿಯೂರು : ಶ್ರೀ ಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವದ ಜಾತ್ರೋತ್ಸವದ ಅಂಗವಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಅರುವಗುತ್ತು ಯಜಮಾನ ಪ್ರದೀಪ್ ಆರ್.ಗೌಡ ಮತ್ತು ವಚನಾ ಪ್ರದೀಪ್ ಆರ್ ಗೌಡ, ಚಂದ್ರಕಲಾ ಜಯರಾಮ ಗೌಡ ಅರುವಗುತ್ತು ಅವರ ಉಪಸ್ಥಿತಿಯಲ್ಲಿ ಅರುವಗುತ್ತಿನಲ್ಲಿ ಪ್ರಾರ್ಥನೆ ಸಲ್ಲಿಸಿ, ಅಂಬುಲದಲ್ಲಿ ಗೊನೆಮುಹೂರ್ತ ನಡೆಯಿತು. ಪ್ರಧಾನ ಪರಿಚಾರಕ ಧರ್ಮಪಾಲ ಅಂಬುಲ ಗೊನೆ ಮುಹೂರ್ತ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೂಡುಕಟ್ಟಿನ ನಾಲ್ಕುಮನೆ, 13 ವರ್ಗ, ಕೊಪ್ಪ ಮೂವತ್ತು ಮನೆ ಯಜಮಾನರು,.ಯು.ಪಿ.ರಾಮಕೃಷ್ಣ, ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ನೇಮಣ್ಣ ಗೌಡ, ಪರಮೇಶ್ವರ ಗೌಡ ಮೀಯೋಳ್ಪೆ, ವಿಶ್ವನಾಥ ಅಂಬುಲ, ಧರ್ಣಪ್ಪ ಅಂಬುಲ, ಪ್ರಕಾಶ್ ಅರುವ, ಜಯಂತ್ ಅಂಬುಲ, ಪ್ರವೀಣ್ ಕುಂಟ್ಯಾನ, ಶೇಖರ ಗೌಡ ಅಂಬುಲ, ಆನಂದ ಗೌಡ ಖಂಡಿಗ, ಮೋನಪ್ಪ ಗೌಡ ಅಂಬುಲ, ಕೃಷ್ಣಪ್ಪ ಗೌಡ ಕೆಳಗಿನಕೇರಿ ಉಪಸ್ಥಿತರಿದ್ದರು.
ಫೆ.7 -8 ನೇಮೋತ್ಸವ : ಫೆ.7 ಮಂಗಳವಾರ ಬೆಳಿಗ್ಗೆ 8 ಕ್ಕೆ ಅರುವಗುತ್ತಿನ ಮನೆಯಲ್ಲಿ ಗಣಹೋಮ, ಸಂಜೆ ಗುತ್ತಿನಮನೆಯಲ್ಲಿ ಪ್ರಾರ್ಥನೆಗೈದು 6 ಗಂಟೆಗೆ ಕೊಪ್ಪ ಚಾವಡಿಯಿಂದ ಭಂಡಾರ ತೆಗೆಯುವುದು. ಫೆ.8 ಬುಧವಾರ ಬೆಳಿಗ್ಗೆ ನೇಮೋತ್ಸವ ನಡೆಯಲಿದೆ. ಎಂಟು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅರುವಗುತ್ತು ಯಜಮಾನ ಪ್ರದೀಪ್ ಆರ್.ಗೌಡ ತಿಳಿಸಿದ್ದಾರೆ.