ಫೆ.5 : ಶಾಂತಿಗೋಡು : ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

ಪುತ್ತೂರು : ಶಾಂತಿಗೋಡು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ವಾರ್ಷಿಕ  ನೇಮೋತ್ಸವ  ಫೆ.5 ರಂದು ನಡೆಯಲಿದೆ. ನೇಮೋತ್ಸವದ ಅಂಗವಾಗಿ ಫೆ.2 ರಂದು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗಪೂಜೆ, 3 ರಂದು ಶಾಸ್ತಾವು ದೇವಸ್ಥಾನದಲ್ಲಿ ರಂಗಪೂಜೆ, 4ರಂದು 6.30 ಕ್ಕೆ ಊರವರಿಂದ ಭಜನಾ ಕಾರ್ಯಕ್ರಮ, ಸರೋಳಿ ಮನೆಯಿಂದ ಭಂಡಾರ ಬರುವುದು, ನಂತರ  ಶಿರಾಡಿ ದೈವದ ಭಂಡಾರ ತೆಗೆಯುವುದು.  ಫೆ.5 ರಂದು ಬೆಳಿಗ್ಗೆ ದೈವಗಳ ನೆಮೋತ್ಸವ, ರಾತ್ರಿ ಗಂಟೆ 10ಕ್ಕೆ ಶಾಂತಿಗೋಡು ದೊಡ್ಡಮನೆಯಿಂದ ಮಾರಿ ಹೊರಡುವುದು ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top