ಪುತ್ತೂರು : ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಸೋಮವಾರ ನಡೆಯಿತು.ಪುತ್ತೂರು ಶಾಸಕ ಸಂಜೀವ ಮಠದೂರು ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಶೋಕ್ ರೈ ಸೊರಕೆ, ಹಿರಿಯ ವಿದ್ಯಾರ್ಥಿ ವಿನೋದ್‌ಶಾಂತಿಗೋಡು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯರಾಮ್ ಶೆಟ್ಟಿ ಸ್ವಾಗತಿಸಿದರು.