ಪುತ್ತೂರು : ಸರ್ವೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಕಾರ್ಯಕ್ರಮ ಹಾಗೂ ಸ್ಮಾಟ್೯ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಮಂಗಳವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಶಿಕ್ಷಕರು ಒಂದೆಡೆ ಪ್ರಯತ್ನ ಮಾಡುತ್ತಿದ್ದರೆ, ಅದಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಶಾಲೆಯ ಅಭಿವೃದ್ಧಿ ಕಾರ್ಯ ಸರಕಾರದಿಂದ ಆಗುತ್ತಿದೆ ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ಹನೀಫ್ ರೆಂಜಾಲಾಡಿ , ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ನಾಯ್ಕ್,, ಪ್ರೌಡ ಶಾಲೆ ಮುಖ್ಯ ಶಿಕ್ಷಕ ಜಯರಾಮ್ ಶೆಟ್ಟಿ, ಕರುಣಾಕರ ಎಲಿಯ,, ರಾಧಾಕೃಷ್ಣ ರೈ ರೆಂಜಾಲಾಡಿ, ಅಶೋಕ್ ರೈ ಸೊರಕೆ, ಹಾಗೂ ಪೋಷಕರು ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕಮಲ ಕೆ.ಸ್ವಾಗತಿಸಿದರು.