ಪುತ್ತೂರು (ವಳಾಲು) : ನೂತನ ಸಾಂದ್ರ ಶೀತಲೀಕರನಣ ಘಟಕ ಉದ್ಘಾಟನೆ ಮತ್ತು ನಾಮ ಫಲಕ ಅನಾವರಣ ಕಾರ್ಯಕ್ರಮ ವಳಾಲುನಲ್ಲಿ ಸೋಮವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ಘಟಕ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಗೆ ಕೇಂದ್ರ ಸರಕಾರದ ಹಲವು ಯೋಜನೆಗಳು ಜನರಿಗೆ ತಲುಪುವ ಕೆಲಸ ಆಗಿದ್ದು, ಕೃಷಿಯನ್ನು ನಂಬಿ ಬದುಕಿದವರಿಗೆ ಕೃಷಿ ಪೂರಕ ಗೊಬ್ಬರ ಅಗತ್ಯವಾಗಿದ್ದು, ಜತೆಗೆ ದನ ಸಾಕುವವರಿಗೆ ಸಂಘದಿಂದ ಸಾಲ ಸೌಲಭ್ಯ ನೀಡುವ ಕೆಲಸ ಆಗಬೇಕು. ಸ್ಥಳೀಯವಾಗಿ ಹಾಲಿನ ಉತ್ಪನ್ನಗಳು ಜನರಿಗೆ ಸಿಗುವ ಕೆಲಸ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆ.ಪಿ.ಸುಚರಿತ ಶೆಟ್ಟಿ, ದ.ಕ.ಜಿ. ಸ. ಹಾ. ಉ. ಒಕೂಟದ ಉಪಾಧ್ಯಕ್ಷರು ಎಸ್ ಬಿ. ಜಯರಾಮ್ ರೈ. ವಳಾಲು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ವಸಂತ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕೂಟ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್.ಕೆ, ಸವಿತಾ ಎನ್. ಶೆಟ್ಟಿ,, ವ್ಯವಸ್ಥಾಪಕ ನಿರ್ದೇಶಕ ಡಿ. ಅಶೋಕ್. ಬಜತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ.ಬಿ, ಕೇಶವ ಸುಳ್ಳಿ, ಡಿ. ಆರ್ ಸತೀಶ್ ರಾವ್, ಜಿತೇಂದ್ರ ಪ್ರಸಾದ್, ಮಾಲತಿ ಪಿ, ವಸಂತ ಗೌಡ, ಸುಧಾಕರ ಎನ್, ಪದ್ಮಾವತಿ ಉಪಸ್ಥಿತರಿದ್ದರು.