ಪಡ್ಡಾಯೂರು ಅಂಗನವಾಡಿಯಲ್ಲಿ ಬಾಲಮೇಳ

ಪುತ್ತೂರು : ಬಾಲಮೇಳ ಕಾರ್ಯಕ್ರಮ ಭಾನುವಾರ ಪಡ್ಡಾಯೂರು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗರ್ಭಿಣಿಯರಿಗೆ ಪೋಷಣೆ, ಮೊಟ್ಟೆ ಕೊಡುವ ಕೇಂದ್ರ, ಮತದಾರ ಪಟ್ಟಿ ಸೇರ್ಪಡೆ ಶ್ರೀ ಶಕ್ತಿ ಸಂಘ ಮಹಿಳಾ ಸಂಘ ಹೀಗೆ ಹಲವು ಕಾರ್ಯಕ್ರಮ ಗಳಿಗೆ ಒಂದು ಕೇಂದ್ರವಾಗಿ ಅಂಗನವಾಡಿ ಕೆಲಸ ಮಾಡುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ, ಕೊಠಡಿ ಹೀಗೆ ಸರಕಾರದ ಯೋಜನೆಗಳನ್ನು ಎಲ್ಲಾ ಅಂಗನವಾಡಿಗಳಿಗೂ ಕೊಡುವ ಕೆಲಸ ಆಗಿದೆ ಎಂದರು.

ನಿಶಾನ್ ಕಾರ್ಯಕ್ರಮ ಉದ್ಘಾಟಿಸಿದರು. ವೈಷ್ಣವಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಣಿಲ ತಿಮಪ್ಪ ಶೆಟ್ಟಿ, ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೂವಪ್ಪು, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುಮಿತ್ರ, ಬಾಲವಿಕಾಸ ಸಮಿತಿ ಉಪಾಧ್ಯಕ್ಷ ರಾಮಣ್ಣ ಗೌಡ ಪಾಲ್ಗೊಂಡಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top