ಪುತ್ತೂರು: ಕಾವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬಣ್ಣದ ಕಲರವ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ ಜ. 28ರಂದು ನಡೆಯಿತು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೋವಿಡ್ ನಂತರ ಸಾಮಾಜಿಕ ಬದಲಾವಣೆಗಳು ಬಹಳಷ್ಟು ಆಗಿವೆ. ಇದರ ನಡುವೆ ನಮ್ಮ ಜೀವನ ಹೇಗಿರಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಬದುಕು ಚೆನ್ನಾಗಿರಬೇಕಾದರೆ, ಶಿಕ್ಷಣದಲ್ಲಿ ಬದಲಾವಣೆ ತೀರಾ ಅವಶ್ಯಕ. ಈ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಎಲ್ಲಾ ಶಾಲೆಗಳಿಗೂ ಸ್ಮಾರ್ಟ್ ಕ್ಲಾಸ್ ಕೊಡುವ ಕೆಲಸ ಆಗಿದೆ ಎಂದರು.
ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮಾನಾಥ ಶೆಟ್ಟಿ ಕಾವು ಅಧ್ಯಕ್ಷತೆ ವಹಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಯತೀಶ್ ಪೂಜಾರಿ, ಚಿಂತಕ ಇಕ್ಬಾಲ್ ಬಾಲಿಲ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ದಿವ್ಯಾನಾಥ ಶೆಟ್ಟಿ,ಅಬ್ದುಲ್ ರಹಿಮಾನ್, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಇಬ್ರಾಹಿಂ ಮಂಜಕೊಟ್ಯ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಗುರು ಸವಿತಾ ಸ್ವಾಗತಿಸಿದರು.