ಪುತ್ತೂರು: ಯುವಿಕ ಪಟ್ಟೆ ಎಂಬ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಮಾದರಿಯಾಗಿ ಆಚರಿಸಿಕೊಳ್ಳಲಾಗಿದೆ. ಬಿರಮಲೆ ಗುಡ್ಡದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಶನಿವಾರ ಮಧ್ಯಾಹ್ನ ಮಗುವಿನ ಹುಟ್ಟುಹಬ್ಬವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ನಡೆಯಿತು.
ಕೇಕ್ ಕತ್ತರಿಸಿ, ಮೊಂಬತ್ತಿ ಬೆಳಗಿಸಿ, ಪಾರ್ಟಿ ನೀಡಿ ಹುಟ್ಟುಹಬ್ಬವನ್ನು ಆಚರಿಸುವ ಇಂದಿನ ದಿನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿತ್ತು. ಮಗುವಿಗೆ ಹಾಗೂ ಜನರಿಗೆ ದೇಶಪ್ರೇಮದ ಪ್ರಜ್ಞೆ ಜಾಗೃತವಾಗಿಸಲು ಇದು ಸಹಕಾರಿಯಾಗಿದೆ.
ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಣೆ ನಡೆದು, ಮಧ್ಯಾಹ್ನ ಪ್ರಜ್ಞಾ ಆಶ್ರಮದ ಸದಸ್ಯರೊಂದಿಗೆ ಭೋಜನ ಏರ್ಪಡಿಸಲಾಯಿತು.