ಪುತ್ತೂರು: ಶಾಂತಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರ, ನೂತನ ಕೊಠಡಿ, ಹಾಗೂ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಜ. 26ರಂದು ನಡೆಯಿತು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ನಮ್ಮ ಸಂಸ್ಕೃತಿಯ ಪ್ರತಿಬಿಂಬ ನಮ್ಮ ಊರಿನ ಶಾಲೆ. ಇಂತಹ ಸರಕಾರಿ ಶಾಲೆಗಳ ಉಳಿವಿಗಾಗಿ ನಮ್ಮ ಕಾರ್ಯ ತುಂಬಾ ಇದೆ. ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸುವ ಮೂಲಕ ಮೆಕಾಲೆಯ ಶಿಕ್ಷಣ ಪದ್ಧತಿಯಿಂದ ಹೊರತಂದು, ಭಾರತೀಯ ಸಂಸ್ಕೃತಿಗೆ ಪೂರಕವಾದ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಪೂರಕವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ 111 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ, ಬೆಂಚು – ಡೆಸ್ಕು, ಸುಮಾರು 64 ನೂತನ ಕೊಠಡಿಗಳನ್ನು ಹಾಗೂ 215 ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡುವ ಕೆಲಸ ಆಗಿದೆ ಎಂದರು.
ಶಾಂತಿಗೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಕುಲಾಲ್ ಮಾತನಾಡಿ, ಶಾಂತಿಗೋಡಿನಲ್ಲಿ ಉತ್ತಮ ಕೆಲಸ ಮಾಡುವ ಯುವಕ ಮಂಡಲವಿದೆ. ಈ ಯುವಕ ಮಂಡಲ ಶಾಲೆಗಾಗಿ ಹಗಲಿರುಳು ದುಡಿಯಲು ಸಿದ್ಧವಾಗಿದೆ ಎಂದರು.
ಇದೇ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಂತಿಗೋಡು ಶಾಲೆಯಿಂದ ವರ್ಗಾವಣೆಗೊಂಡ ಮುಖ್ಯಗುರು ಗೀತಾ ಕುಮಾರಿ, ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷೆ ಪ್ರಮೀಳಾ ಜನಾರ್ದನ್ ಆಚಾರ್ಯ ಶಾಂತಿಗೋಡು, ಅಬಕಾರಿ ಇಲಾಖೆಯ ನಿವೃತ ಸಿಬಂದಿ ಕೃಷ್ಣಪ್ಪ ಪೂಜಾರಿ ಕೈಂಡಾಡಿ, ನಿವೃತ ಸೈನಿಕ ವಸಂತ ಪೂಜಾರಿ ಸರಕಾರೆ, ನಿವೃತ ಗ್ರಾಮ ಸಹಾಯಕ ವಿಶ್ವನಾಥ್ ನಾಯಕ್ ಕೊಡಿ ಕಲ್ಕರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಿವೃತ ಶಿಕ್ಷಕ ರಾಮಕೃಷ್ಣ ಭಟ್ ಗುಂಡಿಬೈಲ್, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಹೋನಪ್ಪ ಪೂಜಾರಿ ಕೈಂಡಾಡಿ, ಉಸ್ತುವಾರಿ ಸಮಿತಿ ಅಧ್ಯಕ್ಷ ದೇವಪ್ಪ ಗೌಡ ಓಲಾಡಿ, ಉಸ್ತುವಾರಿ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಪಿ ನಾಯ್ಕ್ ಶಾಂತಿಗೋಡು, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯೆ ಆಶಾ ಸಚೀಂದ್ರ ಬಾಳ್ಳೆಕ್ಕು, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಸುಧೀರ್ ಶೆಟ್ಟಿ ಕುದ್ರೆಪಾಡಿ, ಪ್ರಭಾರ ಮುಖ್ಯ ಗುರುಗಳು ಸವಿತಾ ಕುಮಾರಿ, ಎಸ್ ಡಿ ಎಮ್ ಸಿ ಅಧ್ಯಕ್ಷೆ ಸುಮಾವತಿ, ಉಪಾಧ್ಯಕ್ಷ ದಾಮೋದರ ಕರ್ಪುತಮೂಳೆ, ವಿಕ್ರಂ ಯುವಕ ಮಂಡಲ ಅಧ್ಯಕ್ಷ ಪ್ರಭಾತ್ ಸರಕಾರೆ ಮುಖ್ಯ ಅತಿಥಿಗಳಾಗಿದ್ದರು.
ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶ್ಯಾಮ್ ಭಟ್, ಬೂತ್ ಅಧ್ಯಕ್ಷ ಎಸ್ ಕೃಷ್ಣ ಸಾಲಿಯಾನ್, ಗ್ರಾಮ ವಿಕಾಸ ಕಾರ್ಯದರ್ಶಿ ವಿನೋದ್ ಕರ್ಪುತಮೂಳೆ, ಪ್ರಸಾದ್ ಕಕ್ವೆ, ಸುದರ್ಶನ್ ಓಲಾಡಿ, ಕೊರಗಪ್ಪ ಕುಕ್ಯನ ಸಹಕರಿಸಿದರು.