ಪುತ್ತೂರು: ನೆಕ್ಕಿಲಾಡಿಯಲ್ಲಿ ಎದುರಾದ ನೀರಿನ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿರುವ ಶಾಸಕ ಸಂಜೀವ ಮಠಂದೂರು ಅವರು, ಕೊಳವೆ ಬಾವಿಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಸಂಜೀವ ಮಠಂದೂರು ಅವರು ನಮ್ಮ ಹೆಮ್ಮೆ ಎಂದು ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಹೇಳಿದರು.
ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 27ರಂದು ನಡೆದ ಸ್ಮಾರ್ಟ್ ಕ್ಲಾಸ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ನೆಕ್ಕಿಲಾಡಿಯಲ್ಲಿ ಅತೀ ಹೆಚ್ಚು ನೀರಿನ ಸಮಸ್ಯೆ ಇತ್ತು. ಎಲ್ಲಾ ಕಡೆಯೂ ಗ್ರಾ.ಪಂ. ವತಿಯಿಂದ ಸಾಧ್ಯವಾದಷ್ಟು ಸ್ಪಂದನೆ ನೀಡಿ, ಸಮಸ್ಯೆ ಪರಿಹರಿಸಿದ್ದೇವೆ. ಆದರೆ ನೆಕ್ಕಿಲಾಡಿಯ ಒಂದು ಪ್ರದೇಶದಲ್ಲಿ ಮಾತ್ರ ಸಮಸ್ಯೆ ಕೈಮೀರಿ ಹೋಗಿತ್ತು. ಇದನ್ನು ಶಾಸಕರ ಗಮನಕ್ಕೆ ತಂದಾಗ, ತಕ್ಷಣವೇ ಸ್ಪಂದಿಸಿ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೀವಂತಿಕೆ ಇರುವ ಶಾಲೆ: ಶಾಸಕ
ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಕ್ಕಳ ಲವಲವಿಕೆ, ಉತ್ಸಾಹ ನೋಡಿ ಬಹಳ ಸಂತೋಷ ಆಗುತ್ತಿದೆ. ಮಕ್ಕಳ ಹಾಗೂ ಶಿಕ್ಷಕರ ಲವಲವಿಕೆಯಿಂದಾಗಿ, ಶಾಲೆಗೆ ಜೀವಂತಿಕೆಯ ಕಳೆ ಬಂದಿದೆ ಎಂದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ್ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಹರೀಶ್ ಬಿಜತ್ರೆ, ಪಂಚಾಯತ್ ಉಪಾಧ್ಯಕ್ಷೆ ಸ್ವಪ್ನ, ಎಸ್. ಡಿ. ಎಂ. ಸಿ ಅಧ್ಯಕ್ಷ ಮುನೀರ್, ಉಪಾಧ್ಯಕ್ಷ ಭರತ್ ಕುಮಾರ್, ಮುಖ್ಯಗುರು ಜೆಸಿಂತಾ ಆನ್ಸಿ ಮಿನೇಜಸ್. ಸಹಶಿಕ್ಷಕರಾದ ತಿಮ್ಮಕ್ಕ ಪಿ., ಅತಿಥಿಶಿಕ್ಷಕಿ ದಿವ್ಯ, ಎಸ್. ಡಿ. ಎಂ. ಸಿ ಸದಸ್ಯರಾದ ಸೀತಾ, ಮೀನಾಕ್ಷಿ, ಷೆರೀಪಾ, ಆಸ್ಮಾ, ತೇಜಾವತಿ, ರಹಿಮತ್, ಪೋಷಕರಾದ ರಮೇಶ್ ಶೆಟ್ಟಿಗಾರ್, ಸುಂದರಿ, ಮರಿಯಮ್ಮ, ಮಿಶ್ರಿಯಾ, ರಝೀಯಾ, ಅನಿತಾ, ಭರತ್ ಕುಮಾರ್, ಅಕ್ಷರದಾಸೋಹದ ಸಿಬ್ಬಂದಿಗಳಾದ ಚಂದ್ರಾವತಿ, ಹೇಮಲತಾ ಉಪಸ್ಥಿತರಿದ್ದರು.