ಪುತ್ತೂರು: ವೀರಮಂಗಲ ಶಾಲೆಯಲ್ಲಿ 74 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.,ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮಾ ಧ್ವಜಾರೋಹಣಗೈದರು. ಬಳಿಕ ಸ್ಕೌಟ್ ಧ್ವಜಾರೋಹಣ ಮಾಡಲಾಯಿತು.ನರಿಮೊಗರು ಗ್ರಾಮ ಪಂಚಾಯಿತಿ ಸದಸ್ಯೆ ಪದ್ಮಾವತಿ ಇವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆಗಳು ಹಾಗೂ ದೇಶಭಕ್ತಿಗೀತೆ ಸಂಬಂಧ ಸೇವಾದಳ ತಂಡದಿಂದ ನೃತ್ಯಕಾರ್ಯಕ್ರಮ ನಡೆಯಿತು.
ಶಾಲೆಯ ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಶೀಲತಾ, ಕವಿತಾ, ಹೇಮಾವತಿ, ಅಡುಗೆ ಸಿಬ್ಬಂಧಿಗಳಾದ ಪಾರ್ವತಿ, ಸುಶೀಲಾ, ಪ್ರೇಮಾ, ಪೋಷಕರಾದ ಆನಂದ ಗೌಡ ಗುತ್ತು, ಸುರೇಶ್ ಗಂಡಿ, ಲಿಂಗಪ್ಪಗೌಡ ಆನಾಜೆ ಫಾರೂಖ್, ಸುರೇಶ್,ಸೆಲಿಂ ಸೆಮೀರ್, ಪುಷ್ಪಾ, ರತ್ನಾವತಿ , ಚಿತ್ರ, ಭವ್ಯ, ಶಾಂಭಲತಾ, ರಾಜೇಶ್ವರಿ, ರಜಾಕ್ ಉಪಸ್ಥಿತರಿದರು.
ಸೇವಾದಳದ ವಿದ್ಯಾರ್ಥಿಗಳು, ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ವಂದೇ ಮಾತರಂ ರಾಷ್ಟ್ರಗೀತೆ ಮತ್ತು ಧ್ವಜ ಗೀತೆಯನ್ನು ಹಾಡಿದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು. ಶಾಲಾ ನಾಯಕಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.